ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಮಾಧೀನರಾದ ಯುವಕರಿಂದ ಮೋದಿ ಜಪ: ದೇವೇಗೌಡ ಟೀಕೆ

ಹೊನ್ನಾವರ: ಮೈತ್ರಿಕೂಟದ ಅಭ್ಯರ್ಥಿ ಪರ ಜೆಡಿಎಸ್ ವರಿಷ್ಠ ಪ್ರಚಾರ
Last Updated 30 ಏಪ್ರಿಲ್ 2019, 16:48 IST
ಅಕ್ಷರ ಗಾತ್ರ

ಹೊನ್ನಾವರ (ಉತ್ತರ ಕನ್ನಡ):‘ಕೇಂದ್ರದಲ್ಲಿ ಹಿಂದಿನ ಸರ್ಕಾರಗಳ ಸಾಧನೆಯ ವಾಸ್ತವಾಂಶಗಳನ್ನು ತಿಳಿದುಕೊಳ್ಳದೆ, ಯುವಕರು ಭ್ರಮಾಧೀನರಾಗಿ ಸಾಮಾಜಿಕ ಜಾಲತಾಣಗಳಲ್ಲಿನರೇಂದ್ರ ಮೋದಿಯ ಜಪ ಮಾಡುತ್ತಿದ್ದಾರೆ’ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡಟೀಕಿಸಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಜೆಡಿಎಸ್‌ನ ಆನಂದ ಅಸ್ನೋಟಿಕರ್ಪರ ಪಟ್ಟಣದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಪಾಕಿಸ್ತಾನವನ್ನು ಹೊಡೆಯಲು ಮೋದಿಯೇಬೇಕು ಎನ್ನುವುದು ಸುಳ್ಳು. ನಾನು ಪ್ರಧಾನಿಯಾಗಿದ್ದಾಗಐದುಬಾರಿ ಪಾಕಿಸ್ತಾನಕ್ಕೆ ಹೋಗಿದ್ದೆ. ಅಲ್ಲಿನ ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಮೋದಿ ಸರ್ಕಾರದಲ್ಲಿ ಮಾಧ್ಯಮದ ಶಕ್ತಿ ಕುಂದಿದ್ದು, ಅಘೋಷಿತ ತುರ್ತುಪರಿಸ್ಥಿತಿ ಸೃಷ್ಟಿಯಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ರೈತರು ಹಾಗೂ ಹಿಂದುಳಿದವರ ಪರವಾಗಿರುವ ನನ್ನ ಕಾಳಜಿಯ ಅರಿವು ಇಲ್ಲದೆ ಕೆಲವರುನನಗೆ ವಯಸ್ಸಾಯ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿಅವಹೇಳನ ಮಾಡುತ್ತಿದ್ದಾರೆ. ನನಗೆ ಮತ್ತೆ ಪ್ರಧಾನಿಯಾಗುವ ಹಂಬಲ ಇಲ್ಲ. ರಾಹುಲ್ ಗಾಂಧಿಗೆ ಮಾರ್ಗದರ್ಶನ ನೀಡಲು ನನ್ನ ಅನುಭವದ ಅಗತ್ಯ ಇದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ’ ಎಂದರು.

‘ರೈತರ ಸಮಸ್ಯೆಗಳ ಬಗ್ಗೆ ಹೇಳಿದಾಗ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ.ಅವರ ಆಡಳಿತದಲ್ಲಿ ಹೋಟೆಲ್‌ನಲ್ಲಿ ದೋಸೆ ತಿನ್ನಲೂ ಶೇ 10ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ರೈತರಿಗೆ ಕೇವಲ ₹ 6 ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿ ಕೊಟ್ಟು, ನಮ್ಮ ಜೇಬಿಗೇ ಕೈ ಹಾಕಿದ್ದಾರೆ. ಮೋದಿ ವಿಮಾನದ ಮೂಲಕ ಡ್ರಮ್‌ನಲ್ಲಿ ಹಣ ತರುತ್ತಾರೆ. ನನ್ನ ಅಂಗಿ ಹಿಡಿದರೂ ಇದರಲ್ಲಿ ಏನೂ ಇಲ್ಲ’ ಎಂದು ಅವರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT