ಈ ಬಾರಿಯದ್ದು ₹3415 ಕೋಟಿ ಖೋತಾ ಬಜೆಟ್

7

ಈ ಬಾರಿಯದ್ದು ₹3415 ಕೋಟಿ ಖೋತಾ ಬಜೆಟ್

Published:
Updated:

ಬೆಂಗಳೂರು: ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ಬಜೆಟ್‌ನ ಗಾತ್ರ 2.34 ಲಕ್ಷ ಕೋಟಿ (₹2,34,153 ಕೋಟಿ). ಈ ಬಾರಿಯ ಬಜೆಟ್‌ ದಾಖಲೆಗಳ ಪ್ರಕಾರ ಆದಾಯ ₹2,30,738 ಕೋಟಿ, ವೆಚ್ಚ ₹2,34,153 ಕೋಟಿ. ಆದಾಯಕ್ಕಿಂತಲೂ ಖರ್ಚು ₹3415 ಕೋಟಿ ಹೆಚ್ಚಾಗಿದೆ. ಹಾಗಾಗಿ ಇದು ಖೋತಾ ಬಜೆಟ್.

ಈ ಬಾರಿ ವಾಣಿಜ್ಯ ತೆರಿಗೆ ಇಲಾಖೆಗೆ ₹76,046 ಕೋಟಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ₹11,828 ಕೋಟಿ, ಅಬಕಾರಿ ಇಲಾಖೆಗೆ ₹20,950 ಕೋಟಿ ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ. ಸಾರಿಗೆ ಇಲಾಖೆಗೆ ₹6,656 ಕೋಟಿ ಸಂಗ್ರಹಣೆಯ ಗುರಿ ನಿಗದಿಪಡಿಸಲಾಗಿದೆ.

ಬಿಯರ್ ಮತ್ತು ಲೋ ಆಲ್ಕೋಹಾಲಿಕೆ ಬಿವರೇಜಸ್ (ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುವ ಪಾನೀಯಗಳು) ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಬಿಯರ್‌ ಮೇಲೆ ಶೇ 175, ಡ್ರಾಟ್ ಬಿಯರ್ ಮೇಲೆ ಶೇ 150, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್‌ ಮೇಲೆ ಪ್ರತಿ ಬಲ್ಕ್‌ ಲೀಟರ್‌ಗೆ ₹25 ಹೆಚ್ಚಿಸಲಾಗುವುದು. ಲೋ ಅಲ್ಕೋಹಾಲಿಕ್ ಬಿವರೇಜಸ್‌ (ಎಲ್‌ಎಬಿ) ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಬಲ್ಕ್‌ ಲೀಟರ್‌ಗೆ ₹10ಕ್ಕೆ ಹಾಗೂ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ150ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿ ಪ್ರಸ್ತಾವನೆ ಮುಂದಿಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !