ಶುಕ್ರವಾರ, ಜೂನ್ 18, 2021
24 °C

ಬಣ್ಣಗಳಲ್ಲಿ ಮಿಂದೆದ್ದ ವಿದೇಶಿಗರು: ಐತಿಹಾಸಿಕ ಹಂಪಿಯಲ್ಲಿ ರಂಗಿನೋಕುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಇಲ್ಲಿನ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಮಂಗಳವಾರ ವಿದೇಶಿ ಪ್ರವಾಸಿಗರು ಬಣ್ಣದಲ್ಲಿ ಮಿಂದೆದ್ದು ಹೋಳಿ ಹಬ್ಬ ಸಂಭ್ರಮಿಸಿದರು.

ಸ್ಥಳೀಯರೊಂದಿಗೆ ರಂಗಿನಾಟವಾಡಿ ಖುಷಿಪಟ್ಟರು. ತಮಟೆ ಸದ್ದಿಗೆ ಚಿಣ್ಣರು, ಯುವಕರೊಂದಿಗೆ ಮೈಮರೆತು ಹೆಜ್ಜೆ ಹಾಕಿದರು. ‘ಹೋಳಿ ಹೈ’ ಎಂದು ಬಣ್ಣ ಎರಚಿ ಕೇಕೆ ಹಾಕಿದರು.

ಚಿಣ್ಣರನ್ನು ಹೆಗಲ ಮೇಲೆ ಕೂರಿಸಿಕೊಂಡು ಕುಣಿದರು. ಪ್ರತಿಯೊಂದು ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದರು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ವಿರೂಪಾಕ್ಷೇಶ್ವರ ದೇವಸ್ಥಾನ ಎದುರಿನ ರಥಬೀದಿ, ಜನತಾ ಪ್ಲಾಟ್‌ನಲ್ಲಿ ಸಂಭ್ರಮ ಮೇರೆ ಮೀರಿತ್ತು. ತುಂಗಭದ್ರಾ ನದಿ ಪಕ್ಕದ ವಿರೂಪಾಪುರ ಗಡ್ಡಿಯಲ್ಲಿನ ಹೋಂ ಸ್ಟೇ, ರೆಸಾರ್ಟ್‌ಗಳನ್ನು ತೆರವುಗೊಳಿಸಿರುವುದರಿಂದ ಹಂಪಿ ಪರಿಸರದಲ್ಲಿನ ಎಲ್ಲಾ ಹೋಟೆಲ್‌ಗಳು ವಿದೇಶಿ ಪ್ರವಾಸಿಗರಿಂದ ಭರ್ತಿಯಾಗಿದ್ದವು. ಹಿಂದಿನ ಸಾಲಿಗಿಂತ ಹೆಚ್ಚಿನ ಪ್ರವಾಸಿಗರು ಕಂಡು ಬಂದರು.

ಕೋವಿಡ್‌–19 ಭೀತಿ ಹಿನ್ನೆಲೆಯಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಬಹುದು ಎನ್ನಲಾಗಿತ್ತು. ಆದರೆ, ಅದನ್ನು ಹುಸಿಗೊಳಿಸಿ ಪ್ರವಾಸಿಗರು ಬಂದಿದ್ದರು. ನಗರದ ರೈಲು ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ಹಂಪಿಯಲ್ಲಿ ಸರ್ಕಾರಿ ವೈದ್ಯರ ತಂಡು ಬೀಡು ಬಿಟ್ಟಿದ್ದು, ವಿದೇಶಿ ಪ್ರವಾಸಿಗರ ತಪಾಸಣೆ ಮಾಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು