ಸೋಮವಾರ, ಮೇ 10, 2021
19 °C

ಜೇನ್ನೊಣ ಕಚ್ಚಿ ಕುಸಿದು ಬಿದ್ದ ವೃದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಬಸವನಗುಡಿ ಬಳಿಯ ನಾಗಸಂದ್ರ ವೃತ್ತದ ಸಮೀಪ ಜೇನ್ನೊಣ ದಾಳಿ ನಡೆಸಿವೆ. ಈ ವೇಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧರೊಬ್ಬರು ಜೇನ್ನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳಲಾಗದೇ ಸ್ಥಳದಲ್ಲೇ ಕುಸಿದುಬಿದ್ದರು. ಅವರನ್ನು ಪಾದಚಾರಿಗಳು ಅವರನ್ನು ಎಬ್ಬಿಸಿ ಆಸ್ಪತ್ರೆಗೆ ಕರೆದೊಯ್ದರು.

‘ಸಮೀಪದಲ್ಲಿ ಉದ್ಯಾನವಿದೆ. ಈ ಪರಿಸರದಲ್ಲಿ ದೊಡ್ಡ ಮರಗಳೂ ಇವೆ. ಅದರಲ್ಲಿ ಜೇನುಗೂಡುಗಳೂ ಇವೆ. ಅವು ಏಕಾಏಕಿ ದಾಳಿ ನಡೆಸಿದ್ದು ಏಕೆ ಎಂಬುದು ತಿಳಿದಿಲ್ಲ. ನೊಣಗಳು ಅನೇಕರಿಗೆ ಕಚ್ಚಿವೆ. ಕೆಲವರು ದಿಕ್ಕಾಪಾಲಾಗಿ ಓಡಿ ದಾಳಿಯಿಂದ ತಪ್ಪಿಸಿಕೊಂಡರು. ಆದರೆ ಅಜ್ಜನಿಗೆ ಓಡಲು ಆಗದೆ ನೊಣಗಳಿಂದ ಕಚ್ಚಿಸಿಕೊಳ್ಳಬೇಕಾಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು