ಶನಿವಾರ, ಜೂಲೈ 11, 2020
22 °C

ಬಂಡೀಪುರ: ಅಕ್ರಮವಾಗಿ ಪ್ರವೇಶಿಸಿದ್ದ ಮೂವರು ವಿದೇಶಿಯರು ಅರಣ್ಯ ಇಲಾಖೆ ವಶದಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪೋರ್ಚುಗಲ್‌ನ‌ ಮೂವರು ಪ್ರಜೆಗಳು ಅಕ್ರಮವಾಗಿ ಪ್ರವೇಶಿಸಿದ್ದಾರೆ.

ಭಾನುವಾರ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಬಾಡಿಗೆ ಬೈಕ್‌ನಲ್ಲಿ ಬಂದಿದ್ದ ಅವರು, ಅನುಮತಿ ಇಲ್ಲದೆ ಬಂಡೀಪುರದ ಅರಣ್ಯದ ರಸ್ತೆಗಳಲ್ಲಿ ಸಂಚರಿಸಿದ್ದಾರೆ.

'ಡಿಆರ್‌ಡಿಒದಲ್ಲಿ ವಿಮಾನ ರಿಪೇರಿ ಮಾಡುವ ಉದ್ದೇಶದಿಂದ ಅವರು ಬೆಂಗಳೂರಿಗೆ ಬಂದಿದ್ದರು. ಅಲ್ಲಿಂದ ಅನುಮತಿ‌ ಇಲ್ಲದೇ ಬಂಡೀಪುರಕ್ಕೆ ಬಂದಿದ್ದಾರೆ' ಎಂದು ಹುಲಿ ಯೋಜನೆ‌ ನಿರ್ದೇಶಕ ಟಿ.ಬಾಲಚಂದ್ರ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

'ಭಾನುವಾರ ಅರಣ್ಯದ ಕಚ್ಚಾ ರಸ್ತೆಯಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದರು. ಸಿಬ್ಬಂದಿ ತಡೆದು ವಿಚಾರಿಸಿದಾಗ ರೇಗಾಡಿದರು. ನಂತರ ಪೊಲೀಸರು ಹಾಗೂ ಇಲಾಖೆಯ ಅಧಿಕಾರಿಗಳು ಹೋದಾಗ ಸುಮ್ಮನಾದರು. ಅವರ‌ ಬಳಿ ಪಾಸ್ ಪೋರ್ಟ್ ಸೇರಿದಂತೆ‌ ಇನ್ನಿತರ ದಾಖಲೆಗಳು ಯಾವುದೂ ಇರಲಿಲ್ಲ. ಬೆಂಗಳೂರು ಬಿಟ್ಟು ಬೇರೆಲ್ಲೂ ಹೋಗುವುದಕ್ಕೆ‌ ಅನುಮತಿಯನ್ನು ಅವರು ಹೊಂದಿಲ್ಲ. ಹಾಗಿದ್ದರೂ ಬಾಡಿಗೆ ಬೈಕ್‌ನಲ್ಲಿ‌ ಬಂದಿದ್ದಾರೆ. ನಾವು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ. ಮುಂದಿನ ಕ್ರಮ ಅವರು ಕೈಗೊಳ್ಳುತ್ತಾರೆ' ಎಂದು ಬಾಲಚಂದ್ರ ತಿಳಿಸಿದರು.

ಸದ್ಯ ‌ಮೂವರೂ ಗುಂಡ್ಲುಪೇಟೆ ಪಟ್ಟಣದಲ್ಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು