ಶನಿವಾರ, ಜನವರಿ 18, 2020
20 °C

ಸರ್ಕಾರದಲ್ಲಿ ಪೀಠಾಧಿಪತಿಗಳ ಹಸ್ತಕ್ಷೇಪ ಸಲ್ಲ: ಮುರುಘಾ ಮಠದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸನಗರ: ‘ಸಮಾಜದ ಪೀಠಾಧಿಪತಿಗಳು ಸರ್ಕಾರದ ಆಡಳಿತಾತ್ಮಕ ವಿಚಾರಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಬಾರದು. ಇದರಿಂದ ರಾಜಕೀಯ ವ್ಯಕ್ತಿಗಳು ಸಾರ್ವಜನಿಕವಾಗಿ ಮುಜುಗರಕ್ಕೀಡಾಗುವ ಅಪಾಯವಿದೆ’ ಎಂದು ಆನಂದಪುರದ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸದಾನಂದಯೋಗಾಶ್ರಮ ಮೂಲೆಗೆದ್ದೆ ಮಠದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ‘ಅಂತಹ ಸಂದರ್ಭಗಳಲ್ಲಿ ಸಹಜವಾಗಿಯೇ ಅವರು ಒತ್ತಡಕ್ಕೆ ಸಿಲುಕಬಹುದು. ಅಲ್ಲದೇ ಇಂತಹ ಕಾರ್ಯ ಮಠಾಧೀಶರಿಗೆ ಶೋಭೆ ತರುವುದಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು