ಸೋಮವಾರ, ನವೆಂಬರ್ 18, 2019
25 °C

ಹಿರಿಯ ಕ್ರೀಡಾ ಪತ್ರಕರ್ತ ಯೋಗೇಶ ಗರುಡ ನಿಧನ

Published:
Updated:

ಬೆಂಗಳೂರು: ಗದುಗಿನ ಖ್ಯಾತ ನಾಟಕಕಾರ ಗರುಡ ಸದಾಶಿವರಾಯರ ಮೊಮ್ಮಗ ದಿಗಂಬರ ಯೋಗೇಶ ಗರುಡ (45) ಅವರು ಶುಕ್ರವಾರ ನಿಧನರಾಗಿದ್ದಾರೆ. 

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು.  

ಪ್ರಜಾವಾಣಿ ಪತ್ರಿಕೆಯಲ್ಲಿ ಸುಮಾರು 12 ವರ್ಷ ಹಿರಿಯ ಕ್ರೀಡಾ ವರದಿಗಾರರಾಗಿದ್ದರು. ವಿಜಯ ಕರ್ನಾಟಕದಲ್ಲಿ ಕ್ರೀಡಾ ಸಂಪಾದಕನಾಗಿ ಎರಡು ವರ್ಷ ಕೆಲಸ ಮಾಡಿದ್ದರು. ಅದರ ನಂತರ ಸಿಡ್ನಿ ರೇಡಿಯೋಗೆ ಅರೆಕಾಲಿಕ ವರದಿಗಾರನಾಗಿದ್ದರು.

ಟಿವಿ ವಾಹಿನಿ, ಆಕಾಶವಾಣಿಯ ಚರ್ಚಾ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದ ಅವರು, ಭರತನಾಟ್ಯ ಹಾಗೂ ರಂಗಕರ್ಮಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಯೋಗೇಶ ಗರುಡ ಅವರು ಪತ್ನಿ ಶೋಭಾ ಲೋಕನಾಥ್ ಮತ್ತು ಪುತ್ರಿ ತಪಸ್ಯಾ( 5 ವರ್ಷ) ಅವರನ್ನು ಅಗಲಿದ್ದಾರೆ. 

ಪ್ರತಿಕ್ರಿಯಿಸಿ (+)