ಗುರುವಾರ , ನವೆಂಬರ್ 14, 2019
19 °C

15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್‌ 21ಕ್ಕೆ ಉಪಚುನಾವಣೆ

Published:
Updated:

ನವದೆಹಲಿ: ಅನರ್ಹಗೊಂಡಿರುವ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್‌ 21ರಂದು ಉಪಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಶನಿವಾರ ದಿನಾಂಕ ಪ್ರಕಟಿಸಿದೆ. 

ಒಟ್ಟು 17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿತ್ತು. ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ನ್ಯಾಯಾಲಯ ತಡೆ ನೀಡಿರುವುದರಿಂದ ಉಳಿದ 15 ಕ್ಷೇತ್ರಗಳಿಗೆಚುನಾವಣೆ ನಡೆಯಲಿದೆ.   

ಅಕ್ಟೋಬರ್‌ 21ರಂದು ಚುನಾವಣೆ ನಡೆಯಲಿದ್ದು ಅ.24ಕ್ಕೆ ಫಲಿತಾಂಶ ಹೊರ ಬರಲಿದೆ. ಉಪಚುನಾವಣೆ ದಿನಾಂಕ ಪ್ರಕಟವಾಗಿರುವುದರಿಂದ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. 

ಉಪಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳು: ಗೋಕಾಕ್, ಅಥಣಿ, ರಾಣೆಬೆನ್ನೂರು, ಕಾಗವಾಡ, ಹಿರೇಕೆರೂರು, ವಿಜಯನಗರ, ಯಲ್ಲಾಪುರ, ಚಿಕ್ಕಬಳ್ಳಾಪುರ, ಹುಣಸೂರು, ಕೆ.ಆರ್.ಪೇಟೆ, ಹೊಸಕೋಟೆ, ಕೆ.ಆರ್.ಪುರಂ, ಮಹಾಲಕ್ಷ್ಮಿ ಲೇ ಔಟ್, ಯಶವಂತಪುರ, ಶಿವಾಜಿನಗರ.

ಉಪಚುಣಾವಣೆ ಅಧಿಸೂಚನೆಯ ಪ್ರಕಟಣೆ ದಿನಾಂಕ: 23–09–2019

ನಾಮಪತ್ರ ಸಲ್ಲಿಸಲು ಕಡೆ ದಿನಾಂಕ: 30–09–2019

ನಾಮಪತ್ರ ಹಿಂಪಡೆಯಲು ಕಡೆಯ ದಿನಾಂಕ: 03–10–2019

ಮತದಾನ ದಿನಾಂಕ: 21–10–2019

ಫಲಿತಾಂಶ ದಿನಾಂಕ: 24–10–2019

ಪ್ರತಿಕ್ರಿಯಿಸಿ (+)