ಗುರುವಾರ , ಸೆಪ್ಟೆಂಬರ್ 23, 2021
22 °C

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರಿಗೆ ಸವಾಲೆಸೆದ ಕರ್ನಾಟಕ ಬಿಜೆಪಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

BJP Tweet

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರಿಗೆ ಬಿಜೆಪಿ ಕರ್ನಾಟಕ ರಾಜ್ಯ ಘಟಕ ಸವಾಲು ಎಸೆದಿದೆ. ಪೌರತ್ವ ಕಾಯ್ದೆ ಯಾವ  ರೀತಿ ಭಾರತೀಯರನ್ನು ಬಾಧಿಸುತ್ತದೆ ಎಂದು ಹೇಳಿ ಎಂಬುದು ರಾಜ್ಯ ಬಿಜೆಪಿಯ ಟ್ವೀಟ್.

ಸಿಎಎಯನ್ನು ವಿರೋಧಿಸುವವರೇ, ಈ ಮಾನವತಾವಾದಿ ಕಾಯ್ದೆಯಿಂದ ಬಾಧಿತರಾಗಿರುವ  ಭಾರತದ ಪ್ರಜೆಗಳ ಪಟ್ಟಿಯನ್ನು ಕೊಡಿ. ಅದರ ಜತೆಗೆ  ಈ ಕಾಯ್ದೆ ಯಾವ ರೀತಿಯಲ್ಲಿ ಅವರನ್ನು ಬಾಧಿಸಿದೆ ಎಂಬುದನ್ನೂ ಉಲ್ಲೇಖಿಸಿ. ನಿಮಗೆ ಅಂತಾ ಒಂದು ಹೆಸರನ್ನು ಕೂಡಾ ನೀಡಲು ಸಾಧ್ಯವಾಗುವುದಿಲ್ಲ ಎಂದು ಸವಾಲು ಹಾಕುತ್ತಿದೇವೆ ಎಂದು ಬಿಜೆಪಿ ಬುಧವಾರ ಟ್ವೀಟಿಸಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು