ಬುಧವಾರ, ಜನವರಿ 29, 2020
31 °C
‘ಅನರ್ಹ’ಗೆ ಅರ್ಹ ಪಟ್ಟ ಕಟ್ಟಿದ ಮತದಾರರು

ಗೋಕಾಕ: ಸಹೋದರರ ಸ್ಪರ್ಧೆಯಲ್ಲಿ ರಮೇಶ ಜಾರಕಿಹೊಳಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಮೇಶ ಜಾರಕಿಹೊಳಿ ಸೋದರ ಲಖನ್ ಜಾರಕಿಹೊಳಿಯನ್ನು ಹಿಂದಿಕ್ಕಿ ಗೆಲುವಿನ ನಗೆ ಬೀರಿದ್ದಾರೆ.

ಅಂತಿಮ ಸುತ್ತಿನ ಮತ ಎಣಿಕೆ ಮುಗಿದಿದ್ದು ರಮೇಶ ಜಾರಕಿಹೊಳಿ ಅವರು 29006 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಲಖನ್ ಜಾರಕಿಹೊಳಿ ಅವರು ಸೋಲನುಭವಿಸಿದ್ದಾರೆ. ಜೆಡಿಎಸ್‌ನ ಅಶೋಕ ಪೂಜಾರಿ ಮೂರನೆ ಸ್ಥಾನಕ್ಕೆ ಇಳಿದಿದ್ದಾರೆ. 

ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಸ್ಪರ್ಧೆಯಿಂದಾಗಿ ಗೋಕಾಕ ಉಪ ಚುನಾವಣಾ ಕಣ ರಾಜ್ಯದ ಗಮನ ಸೆಳೆದಿತ್ತು. ಇಲ್ಲಿ ರಮೇಶ್ ಅವರ ಸಹೋದರ ಲಖನ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು.

ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ: ಇಲ್ಲಿದೆ ಮುನ್ನಡೆ, ಗೆದ್ದವರು, ಸೋತವರ ವಿವರ

ಪಕ್ಷ, ಸಿದ್ಧಾಂತ, ಸಂಘಟನೆಗಿಂತಲೂ ‘ಜಾರಕಿಹೊಳಿ’ ಕುಟುಂಬ ಕೇಂದ್ರಿತ ರಾಜಕಾರಣವಿರುವ ಗೋಕಾಕದಲ್ಲಿ ಕಳೆದ ವರ್ಷ ನಡೆದಿದ್ದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಉಪಚುನಾವಣೆಯಲ್ಲಿ ಶೇ 1.31ರಷ್ಟು (ಶೇ 73.08) ಹೆಚ್ಚು ಮತದಾನವಾಗಿತ್ತು.


ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ರಮೇಶ ಜಾರಕಿಹೊಳಿ

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು