ಬೆಂಗಳೂರು: ಮೇ 18ರಂದು ಸಂಜೆ 5ರಿಂದ ಮೇ 19ರ ಸಂಜೆ5ರ ವರೆಗೂ ರಾಜ್ಯದಲ್ಲಿ ಕೋವಿಡ್–19 ದೃಢಪಟ್ಟ 149ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 1395ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಈವರೆಗೂ 40 ಮಂದಿ ಸಾವಿಗೀಡಾಗಿದ್ದು, 543ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ನಿಗದಿತ ಆಸ್ಪತ್ರೆಗಳಲ್ಲಿ 811ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಸಂಜೆಯಿಂದ ಈವರೆಗೆ ಬಳ್ಳಾರಿ (61 ವರ್ಷ), ವಿಜಯಪುರ (65 ವರ್ಷ) ಹಾಗೂ ಬೆಂಗಳೂರಿನ (54 ವರ್ಷ) ತಲಾ ಒಬ್ಬ ಸೋಂಕಿತ ವ್ಯಕ್ತಿ ಸಾವಿಗೀಡಾಗಿದ್ದಾರೆ.

ಮಂಡ್ಯದಲ್ಲಿ 71ಪ್ರಕರಣಗಳು,ದಾವಣಗೆರೆ 22ಪ್ರಕರಣಗಳು, ಶಿವಮೊಗ್ಗದಲ್ಲಿ 12, ಕಲಬುರ್ಗಿಯಲ್ಲಿ 13, ಉತ್ತರ ಕನ್ನಡದಲ್ಲಿ ಮತ್ತು ಉಡುಪಿಯಲ್ಲಿ ತಲಾ 4,ಹಾಸನದಲ್ಲಿ 3, ಬಾಗಲಕೋಟೆಯಲ್ಲಿ 5, ಬೆಂಗಳೂರಿನಲ್ಲಿ ಆರುಮಂದಿಗೆ ಸೋಂಕು, ರಾಯಚೂರು ಮತ್ತು ಬೀದರ್‌ನಲ್ಲಿ ತಲಾ 1 ಪ್ರಕರಣಹಾಗೂ ಹಸಿರು ವಲಯದಲ್ಲಿದ್ದ ಚಿಕ್ಕಮಗಳೂರಿನಲ್ಲಿ ಐದು ಪ್ರಕರಣಗಳು ದಾಖಲಾಗಿವೆ.

ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ 71ಕೋವಿಡ್-19 ಪ್ರಕರಣ ದೃಢಪಡುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 160ಕ್ಕೆ ಏರಿಕೆಯಾಗಿದೆ.ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಸೋಂಕು ಪ್ರಕರಣ ದಿನೇ ದಿನೇಹೆಚ್ಚುತ್ತಲೇ ಇದೆ. ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಪೈಕಿ ಮಂಡ್ಯ 2ನೇ ಸ್ಥಾನಕ್ಕೇರಿದೆ.

ಕಾಫಿನಾಡಿಗೆ ಕಾಲಿಟ್ಟ ಕೋವಿಡ್

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪದ ಕೇಂದ್ರದಲ್ಲಿ ಕ್ವಾರಂಟೈನಲ್ಲಿದ್ದ ಮೂವರಿಗೆ ಕೋವಿಡ್-19 ಪತ್ತೆಯಾಗಿದೆ, ಕಾಫಿನಾಡಿನಲ್ಲಿ ಒಂದೇ ದಿನ ಐವರಿಗೆ ಸೋಂಕು ದೃಢಪಟ್ಟಿದೆ.

ಕೋವಿಡ್ ಪತ್ತೆಯಾಗಿರುವ ಮೂಡಿಗೆರೆಯ ವೈದ್ಯಾಧಿಕಾರಿ(43) ಕಳೆದ 20 ದಿನಗಳಲ್ಲಿ ಬೆಂಗಳೂರು, ಕೊಡಗಿಗೆ ಪ್ರಯಾಣ ಮಾಡಿದ್ದರು. ಆಸ್ಪತ್ರೆಯಲ್ಲಿ ಹಲವಾರು ಮಂದಿಗೆ ಚಿಕಿತ್ಸೆ ನೀಡಿದ್ದಾರೆ. ಸಂಪರ್ಕ ಕ್ರಮಣಿಕೆ ತಲಾಶ್ ಶುರುವಾಗಿದೆ.

ತರೀಕೆರೆಯ ಕೋಡಿ ಕ್ಯಾಂಪ್‌ನ ಗರ್ಭಿಣಿಗೆ (27) ಕೋವಿಡ್ ಪತ್ತೆಯಾಗಿದ್ದು, ಈ ಮಹಿಳೆ ಮುಂಬೈನಿಂದ ಇಲ್ಲಿಗೆ ಬಂದಿದ್ದಾರೆ.

ಹೊರ ರಾಜ್ಯಗಳಿಂದ ಬಂದ ನಾಲ್ವರಿಗೆ ಕೋವಿಡ್ ದೃಢ

ಕಾರವಾರ: ಹೊರರಾಜ್ಯಗಳಿಗೆ ಪ್ರಯಾಣ ಬೆಳೆಸಿದ ಜಿಲ್ಲೆಯ ನಾಲ್ವರಿಗೆ ಮಂಗಳವಾರ ಕೋವಿಡ್ 19 ದೃಢಪಟ್ಟಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು 45ಕ್ಕೇರಿದೆ.

ಅವರಲ್ಲಿ ಮೂವರು ಮಹಿಳೆಯರು ಸೇರಿದ್ದು, ಒಬ್ಬರು ಪುರುಷರಾಗಿದ್ದಾರೆ. 1313 ಸಂಖ್ಯೆಯ ರೋಗಿ 24 ಪುರುಷದ ಯುವಕ ಗುಜರಾತ್ಗೆ, 1314 ಸಂಖ್ಯೆಯ ರೋಗಿ 16 ವರ್ಷದ ಬಾಲಕನಾಗಿದ್ದು, ಮಹಾರಾಷ್ಟ್ರದ ಸೊಲ್ಲಾಪುರದಿಂದ ವಾಪಸಾಗಿದ್ದ. 1362 ಸಂಖ್ಯೆಯ 31 ವರ್ಷದ ಮಹಿಳೆಯು ತಮಿಳುನಾಡಿನ ಮಧುರೈಗೆ ಹಾಗೂ 1363 ಸಂಖ್ಯೆಯ ರೋಗಿ 34 ವರ್ಷದ ಮಹಿಳೆಯಾಗಿದ್ದು ಮುಂಬೈನಿಂದ ಬಂದಿದ್ದರು.

ಮುಂಬೈನಿಂದ ಉಡುಪಿಗೆ ಬಂದವರಿಗೆ ಸೋಂಕು

ಉಡುಪಿ: ಈಚೆಗೆ ಮುಂಬೈನಿಂದ ಉಡುಪಿಗೆ ಬಂದಿದ್ದ ನಾಲ್ವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇಬ್ಬರು ಪುರುಷರು, ಓರ್ವ ಮಹಿಳೆ ಹಾಗೂ 8 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕ್ವಾರಂಟೈನ್‌ನಲ್ಲಿದ್ದ ಸೋಂಕಿತರಿಗೆ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರ್ಗಿ: ಮತ್ತೆ 11 ಜನರಿಗೆ ಕೋವಿಡ್ ಸೋಂಕು

ಕಲಬುರ್ಗಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡು ಕಂಡು ಬಂದಿದ್ದು, ಮಂಗಳವಾರ 11 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಇವರೆಲ್ಲ ಮಹಾರಾಷ್ಟ್ರದ ಮುಂಬೈನಿಂದ ವಾಪಸಾಗಿದ್ದು, ಜಿಲ್ಲೆಯ ವಿವಿಧೆಡೆ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಇರಿಸಲಾಗಿತ್ತು. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ125ಕ್ಕೆ ಏರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.