ಭಾನುವಾರ, ಆಗಸ್ಟ್ 18, 2019
23 °C

ಪ್ರವಾಹದಲ್ಲೇ ನೃತ್ಯ: ಹಳ್ಳಿ ಜನರ ಜೀವನೋತ್ಸಹ ಕಂಡು ಫಿದಾ ಆದ ನೆಟ್ಟಿಗರು

Published:
Updated:

ಬೆಳಗಾವಿ: ಕೊಡಗು, ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಿಲ್ಲ. ಹಲವು ಗ್ರಾಮಗಳು ಮುಳುಗಡೆಯಾಗಿವೆ. ನಗರಗಳಿಗೂ ನೀರುನುಗ್ಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಇಲ್ಲಿಯವರೆಗೆ ಸುಮಾರು 11 ಜನರು ಪ್ರಾಣತೆತ್ತಿದ್ದಾರೆ. ಮುಂದೇನು ಎಂಬ ಪ್ರಶ್ನೆ ಕಾಡುತ್ತಿರುವ ಈ ಹೊತ್ತಿನಲ್ಲಿ, ಬೆಳಗಾವಿಯ ಯಮಗರನಿ ಹಳ್ಳಿಯ ಜನ ಉಕ್ಕಿ ಹರಿಯುತ್ತಿರುವ ಪ್ರವಾಹದಲ್ಲೇ ಕುಣಿದು ಕುಪ್ಪಳಿಸಿದ್ದಾರೆ.

ಇದನ್ನೂ ಓದಿ: ಮಳೆ–ಪ್ರವಾಹ Live| ವೇದಗಂಗಾ ನದಿ ಪ್ರವಾಹ ವೀಕ್ಷಿಸಿದ ಸಿಎಂ ಯಡಿಯೂರಪ್ಪ

ಪ್ರವಾಹದಿಂದಾಗಿ ನಿಪ್ಪಾಣಿ–ಕೊಲ್ಹಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಅದೇ ನೀರಿನಲ್ಲಿ ಯಮಗರನಿ ನಿವಾಸಿಗಳು ನೃತ್ಯಮಾಡಿ ಸಂಭ್ರಮಿಸಿದ್ದಾರೆ. 44 ಸೆಕೆಂಡ್‌ಗಳ ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಎಎನ್‌ಐ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ಈ ವಿಡಿಯೊಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 670ಕ್ಕೂ ಹೆಚ್ಚು ಜನರು ತಮ್ಮ ಖಾತೆಗಳಲ್ಲಿ ಶೇರ್‌ ಮಾಡಿಕೊಂಡಿದ್ದು, ಎರಡೂವರೆ ಸಾವಿರ ಜನ ಮೆಚ್ಚಿಕೊಂಡಿದ್ದಾರೆ.

‘ಪ್ರವಾಹವನ್ನು ಸ್ವಾಗತಿಸುವ ಅತ್ಯುತ್ತಮ ವಿಧಾನ ಇದು’, ‘ಮಕ್ಕಳು ಮಳೆಯಲ್ಲಿ ಡ್ಯಾನ್ಸ್‌ ಮಾಡ್ತರೆ, ಪ್ರವಾಹದಲ್ಲಿ ಡ್ಯಾನ್ಸ್‌ ಮಾಡೋಕೆ ಲೆಜೆಂಡ್‌ಗಳಿಂದ ಮಾತ್ರ ಸಾಧ್ಯ’ ‘ಇದು ಭಾರತೀಯರ ಜೀವನ ಪ್ರೇಮವೆಂದರೆ ಇದು’, ‘ನೆಲದ ಮೇಲೆ ನೃತ್ಯ ಮಾಡುವುದು ಸಾಮಾನ್ಯ. ಆದರೆ, ನೆರೆಯಲ್ಲಿ ನೃತ್ಯಮಾಡುವುದು ಹೊಸ ಟ್ರೆಂಡ್‌’ ಎಂಬರ್ಥದಲ್ಲಿ ಹಲವರು ಅಭಿಪ್ರಾಯಪಟ್ಟಿದ್ದಾರೆ.

Post Comments (+)