ಸೋಮವಾರ, ಆಗಸ್ಟ್ 26, 2019
28 °C

ರಾಜ್ಯದ 17 ಜಿಲ್ಲೆಯ 80 ತಾಲ್ಲೂಕು ಪ್ರವಾಹಪೀಡಿತ ಪ್ರದೇಶ: ಸರ್ಕಾರ ಘೋಷಣೆ

Published:
Updated:

ಬೆಂಗಳೂರು: ರಾಜ್ಯದ 17 ಜಿಲ್ಲೆಗಳ 80 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ.

ಈ ಸಂಬಂಧ ಶನಿವಾರ ಅಧಿಕೃತವಾಗಿ ಆದೇಶ ಹೊರಡಿಸಿರುವ ಸರ್ಕಾರ, ಆಗಸ್ಟ್‌ 1ರಿಂದ 9ರ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿದ್ದ ಮಳೆ ಹಾಗೂ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದ ತುಂಬಿರುವ ಜಲಾಶಯಗಳಿಂದ ಭಾರೀ ಪ್ರಮಾಣದ ನೀರುನ್ನು ಹರಿಯ ಬಿಟ್ಟ ಪರಿಣಾಮ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ಕಣಿವೆ ಇತರ ನದಿ ತೀರದ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಉಡುಪಿ ಜಿಲ್ಲೆಗಳು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಪ್ರವಾಹದಿಂದ ಹಾನಿಯಾಗಿದೆ. ಆದ್ದರಿಂದ, ತಕ್ಷಣದಿಂದ ಜಾರಿಗೆ ಬರುವಂತೆ ಈ ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಿದೆ. 

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಶಿಫಾಸರು ಮಾಡಲಾಗಿತ್ತು.

ಘೊಷಣೆಯಾದ ಜಿಲ್ಲೆ ಮತ್ತು ತಾಲ್ಲೂಕು  ಕೇಂದ್ರಗಳು

ಇದನ್ನೂ ಓದಿ:  ಮಳೆ–ಪ್ರವಾಹ Live| ಆ.11ರಂದು ದಕ್ಷಿಣ ಕನ್ನಡ, ಆ.12ರಂದು ಉಡುಪಿ ಜಿಲ್ಲೆಗೆ ಸಿಎಂ ಪ್ರವಾಸ

 

 

Post Comments (+)