ಶನಿವಾರ, ಮೇ 30, 2020
27 °C

ಇನ್ನು ಹೊರಗೆ ಹೋಗುವುದಿದ್ದರೆ ಮಾಸ್ಕ್ ಅಗತ್ಯ: ಆರೋಗ್ಯ ಇಲಾಖೆ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲ್ಲರೂ ಮುಖಗವಸು (ಮಾಸ್ಕ್‌) ಧರಿಸಬೇಕಾದ ಅಗತ್ಯವಿಲ್ಲ ಎಂದು ಈ ಹಿಂದೆ ಹೊರಡಿಸಿದ್ದ ಪ್ರಕಟಣೆಯಿಂದ ಹಿಂದೆ ಸರಿದಿರುವ ಆರೋಗ್ಯ ಇಲಾಖೆ, ಸಾರ್ವಜನಿಕರು ಅಪರಿಚಿತರೊಂದಿಗೆ ವ್ಯವಹರಿಸುವಾಗ ಮಾಸ್ಕ್‌  ಧರಿಸುವುದು ಕಡ್ಡಾಯ ಎಂದು ಗುರುವಾರ ಹೊಸದಾಗಿ ಪ್ರಕಟಣೆ ಹೊರಡಿಸಿದೆ.

ಅಗತ್ಯ ವಸ್ತುಗಳ ಖರೀದಿ ವೇಳೆ, ಕಚೇರಿ ಕೆಲಸಗಳಲ್ಲಿ ಭಾಗಿಯಾಗುವಾಗ ಮತ್ತು ಕೋವಿಡ್‌–19 ಸೋಂಕಿತ ವ್ಯಕ್ತಿಗಳೊಂದಿಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೇ ಸಂಪರ್ಕ ಸಾಧಿಸುವಾಗ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ವಯಸ್ಕರು ಧರಿಸುವ ಮಾಸ್ಕ್‌ ಅಳತೆ 7 ರಿಂದ 9 ಇಂಚು ಮತ್ತು ಮಕ್ಕಳು ಧರಿಸುವ ಮಾಸ್ಕ್‌ ಅಳತೆ 5 ರಿಂದ 7 ಇಂಚು ಇರಬೇಕು ಎಂದು ಶಿಫಾರಸು ಮಾಡಲಾಗಿದೆ. ಬಳಸದೇ ಇರುವ ಬನಿಯನ್‌, ಟೀ ಶರ್ಟ್‌ ಅಥವಾ ಕರವಸ್ತ್ರದಂತಹ ಹಳೆಯ ಹತ್ತಿ ಬಟ್ಟೆಯಿಂದ ಮುಖವಾಡ ಹೊಲಿದುಕೊಳ್ಳಬಹುದು. ಸಿಂಥೆಟಿಕ್‌ ಬಟ್ಟೆಗಳನ್ನು ಬಳಸುವುದು ಸೂಕ್ತವಲ್ಲ ಎಂದೂ ಹೇಳಿದೆ.

ಇದನ್ನೂ ಓದಿ: ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ: ಸಲಹಾಸೂತ್ರ ಪ್ರಕಟಿಸಿದ ಆರೋಗ್ಯ ಸಚಿವಾಲಯ

ಈ ಮಾಸ್ಕ್‌ಗಳನ್ನು ಶುಚಿಗೊಳಿಸಿ ಮರುಬಳಕೆ ಮಾಡಬಹುದಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ ಎರಡು ಮಾಸ್ಕ್‌ಗಳನ್ನು ಹೊಂದಿರಬೇಕು. ಆದರೆ, ಬ್ಯಾಕ್ಟೀರಿಯಾ ಮತ್ತು ವೈರಸ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವೈದ್ಯಕೀಯವಾಗಿ ಪ್ರಮಾಣೀಕರಿಸಿದ ಮಾಸ್ಕ್‌ಗಳನ್ನು ಮಾತ್ರವೇ ಬಳಸಬೇಕಾಗುತ್ತದೆ ಎಂದೂ ಉಲ್ಲೇಖಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು