ಮಂಗಳವಾರ, ಏಪ್ರಿಲ್ 20, 2021
26 °C

‘ಯಾವುದೇ ಕಾರಣಕ್ಕೂ ವಾಪಸ್ ಬರಲ್ಲ’– ಅತೃಪ್ತ ಶಾಸಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿರುವ ಅತೃಪ್ತರು ಭಾನುವಾರ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದ್ದಾರೆ. ನಾವು ಯಾರ ಗನ್‌ಪಾಯಿಂಟ್‌ನಲ್ಲೂ ಇಲ್ಲ. ಜೀವಂತವಾಗಿ ಇದ್ದೇವೆ. ಯಾರ ಒತ್ತಡಕ್ಕೂ ಮಣಿಯಲ್ಲ, ವಾಪಸ್ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯಾರೇ ಸಿ.ಎಂ ಆದರೂ ಬರಲ್ಲ

ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಯಾರೇ ಮುಖ್ಯಮಂತ್ರಿಯಾದರೂ ವಾಪಸ್ ಬರುವುದಿಲ್ಲ. ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನೂ ಹಿಂದಕ್ಕೆ ಪಡೆಯುವುದಿಲ್ಲ. ಇಲ್ಲಿ ಇರುವ ಎಲ್ಲ 13 ಶಾಸಕರು ಒಟ್ಟಾಗಿದ್ದೇವೆ. ಪಕ್ಷದಲ್ಲಿ ಉಳಿದಿರುವ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ನಾವು ವಾಪಸ್ ಬರುತ್ತಾರೆ ಎಂದು ಹೇಳಿಕೆ ಕೊಡಿಸಲಾಗುತ್ತಿದೆ. ಸಿದ್ದರಾಮಯ್ಯ ಬಂದು ಕರೆದರೂ ಬರುವುದಿಲ್ಲ. ಈವರೆಗೂ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ.

–ಎಂ.ಟಿ.ಬಿ.ನಾಗರಾಜ್

ರಾಕ್ಷಸ ರಾಜಕಾರಣ

ರಾಜ್ಯದಲ್ಲಿ ರಾಕ್ಷಸ ರಾಜಕಾರಣ ನಡೆಯುತ್ತಿದ್ದು, ಮೈತ್ರಿ ನಾಯಕರಿಗೆ ಬುದ್ದಿ ಕಲಿಸಬೇಕಿದೆ. ರಾಜ್ಯ ರಾಜಕಾರಣಕ್ಕೆ‌ ಒಳ್ಳೆಯದಾಗಬೇಕು, ಮೈತ್ರಿ‌ ನಾಯಕರಿಗೆ‌ ಬುದ್ದಿ ‌ಕಲಿಸಬೇಕಿದೆ. ದುಡ್ಡು, ಅಧಿಕಾರಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ.

–ಎಚ್.ವಿಶ್ವನಾಥ್

ಜೀವಂತ ಬದುಕಿದ್ದೇವೆ

ನಾವು ಜೀವಂತವಾಗಿ ಬದುಕಿದ್ದು, ಆರೋಗ್ಯವಾಗಿದ್ದೇವೆ. ಯಾರ ಗನ್ ಪಾಯಿಂಟ್‌ನಲ್ಲೂ ಇಲ್ಲ. ವಿಧಾನ ಸಭೆಯಲ್ಲಿ ಶಾಸಕರೊಬ್ಬರು ನಾವು ಬದುಕಿರುವ ‌ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಈ ಸ್ಪಷ್ಟನೆ.

–ಎಸ್‌.ಟಿ.ಸೋಮಶೇಖರ್

ಬೆಂಗಳೂರು ನಗರದಲ್ಲಿ ಎರಡು ಬಾರಿ ‌ಶಾಸಕರಾದವರಿಗೆ ಸಚಿವ ಸ್ಥಾನ ನೀಡಿದ್ದು, ಏಳು ಬಾರಿ‌ ಗೆದ್ದವರನ್ನು ಕಡೆಗಣಿಸಲಾಗಿದೆ. ಈಗ ರಾಮಲಿಂಗಾರೆಡ್ಡಿ ಅವರನ್ನು ಉಪಮುಖ್ಯಮಂತ್ರಿ ‌ಮಾಡುವುದಾಗಿ ಹೇಳುತ್ತಿರುವುದು ಏಕೆ. ಸರ್ಕಾರ ‌ನಡೆಸುತ್ತಿರುವ ನಾಯಕರ ವರ್ತನೆ ಬೇಸರ ತರಿಸಿದೆ.

–ಮುನಿರತ್ನ

ನಮ್ಮ ಸ್ವಾಭಿಮಾನಕ್ಕೆ‌ ಧಕ್ಕೆಯಾಗಿದೆ. ಈಗ ಕೈಗೊಂಡಿರುವ ನಿರ್ಧಾರ ‌ಅಚಲ.

–ಗೋಪಾಲಯ್ಯ‌

ನಾವು ಆಸೆ, ಆಮಿಷಕ್ಕೆ ಒಳಗಾಗಿ‌ ಬಂದಿಲ್ಲ. ಯಾರ ಒತ್ತಡದಲ್ಲೂ ‌ಇಲ್ಲ.

–ಬಿ.ಸಿ.ಪಾಟೀಲ್

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು