ಮಂಗಳವಾರ, ನವೆಂಬರ್ 19, 2019
29 °C

ಜೆಡಿಎಸ್‌ನಿಂದ ಪುಟ್ಟಣ್ಣ ಉಚ್ಚಾಟನೆ

Published:
Updated:

ರಾಮನಗರ: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಪ್ರಕಟಣೆ ಹೊರಟಿಸಿದ್ದಾರೆ.

ಚನ್ನಪಟ್ಟಣದವರಾದ ಪುಟ್ಟಣ್ಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನಿಂದ  ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅವರ ಸದಸ್ಯತ್ವದ ಅವಧಿ 2020ರ ಜೂನ್ ವರೆಗೆ ಇದೆ. ಎಚ್.ಡಿ. ಕುಮಾರಸ್ವಾಮಿ ನಡುವಿನ ಭಿನ್ನಾಭಿಪ್ರಾಯದಿಂದ ಅವರು ಕಳೆದ ಕೆಲ ವರ್ಷಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು.

ಇದನ್ನೂ ಓದಿ: ಹೊರಟ್ಟಿ ಜೆಡಿಎಸ್‌ನ ಆಸ್ತಿ, ಪುಟ್ಟಣ್ಣನಿಂದ ಪಕ್ಷಕ್ಕೆ ಏನೂ ಆಗಬೇಕಿಲ್ಲ: ರೇವಣ್ಣ

ಈಚೆಗೆ ರಾಮನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಪುಟ್ಟಣ್ಣ, ‘ನಾನೂ ಸೇರಿದಂತೆ ಜೆಡಿಎಸ್‌ನ ಬಹುತೇಕ ಪರಿಷತ್ ಸದಸ್ಯರು ಪಕ್ಷ ತೊರೆಯಲು ಚಿಂತನೆ ನಡೆಸಿದ್ದೇವೆ’ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಜೆಡಿಎಸ್ ಬಿಡಲು ಪುಟ್ಟಣ್ಣ ತೀರ್ಮಾನ

ಪ್ರತಿಕ್ರಿಯಿಸಿ (+)