ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಜಾ ಬಂದಾ ನವಾಜ್‌ ಉರುಸ್‌ ರದ್ದು

Last Updated 4 ಜುಲೈ 2020, 14:51 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಖಾಜಾ ಬಂದಾ ನವಾಜ್‌ ದರ್ಗಾದ ಉರುಸ್‌ ಅನ್ನು ಈ ಬಾರಿ ಕೈ ಬಿಡಲಾಗಿದೆ ಎಂದು ದರ್ಗಾದ ಮುಖ್ಯಸ್ಥ ಸಯ್ಯದ್‌ ಶಾ ಖುಸ್ರೊ ಹುಸೇನಿ ಸಜ್ಜಾದಾ ನಶೀನ್‌ ತಿಳಿಸಿದ್ದಾರೆ.‌

‘ಜುಲೈ 6ರಿಂದ 10ರವರೆಗೆ ಉರುಸ್‌ ನಡೆಸಲು ಉದ್ದೇಶಿಸಲಾಗಿತ್ತು. ದೇಶದ ಎಲ್ಲೆಡೆ ಕೊರೊನಾ ಉಪಟಳ ಹೆಚ್ಚಿದೆ.ಉರುಸ್‌ಗೆ ದೇಶದ ಮೂಲೆಮೂಲೆಯಿಂದ ಅಪಾರ ಭಕ್ತರು ಬರುತ್ತಾರೆ. ಆಗ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಜನರ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು ಉರುಸ್‌, ಗಂಧದ ಮೆರವಣಿಗೆ, ಸೂಫಿ ಸಂತರ ಗ್ರಂಥಗಳ ಮೆರವಣಿಗೆ ಹಾಗೂ ತಿಂಗಳವರೆಗೆ ನಡೆಯುವ ಜಾತ್ರೆಯನ್ನು ಕೈಬಿಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಖಾಜಾ ಬಂದಾ ನವಾಜ್‌ರ ಕುಟುಂಬ ವರ್ಗದವರು ಮಾತ್ರ ದರ್ಗಾದ ಒಳಗೇ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸುತ್ತೇವೆ. ಭಕ್ತರು ತಮ್ಮ ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT