ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಎಫ್ ಅಧ್ಯಕ್ಷರ ತವರಲ್ಲೇ ಭಾರಿ ಪ್ರಮಾಣದ ಹಾಲು ಕಾಲುವೆ ಪಾಲು!

Last Updated 31 ಮಾರ್ಚ್ 2020, 10:08 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ವೈರಾಣು ಸೋಂಕು ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಪರಿಣಾಮ ಮಾರಾಟವಾಗಲಿಲ್ಲ ಎನ್ನಲಾದ ಭಾರಿ ಪ್ರಮಾಣದ ಹಾಲನ್ನು ಉತ್ಪಾದಕರು ಕಾಲುವೆ ಪಾಲು ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ರಾಯಬಾಗ ತಾಲ್ಲೂಕಿನ ಪಾಲಭಾವಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಬರೋಬ್ಬರಿ 40 ಕ್ಯಾನುಗಳಲ್ಲಿದ್ದ (ತಲಾ 25 ಲೀಟರ್ ಸಾಮರ್ಥ್ಯ) ಹಾಲನ್ನು ಯುವಕನೊಬ್ಬ ಘಟಪ್ರಭಾ ಎಡದಂಡೆ ಕಾಲುವೆಗೆ ಚೆಲ್ಲಿದ್ದಾರೆ. ಕೊರೊನಾ ವೈರಸ್ ನಿನಗೆ ಹಾಲು ಉಧೋ ಉಧೋ ಎನ್ನುವುದು, ಪಂಚಾಯಿತಿಯವರು ಸಾಗಿಸಲು‌ ಬಿಡಲಿಲ್ಲ ಹಾಗೂ ಸೀಜ್ ಮಾಡಿದ್ದಾರೆ ಎನ್ನುವ ಮಾತುಗಳನ್ನು ವಿಡಿಯೊ ಮಾಡಿದವರು ಆಡುತ್ತಿರುವುದು ವಿಡಿಯೊದಲ್ಲಿದೆ.

ಹಾಲು ಸುರಿದವರು ಅಲ್ಲಿನ ಗೌಳಿ ಸಮಾಜದವರು ಎನ್ನಲಾಗುತ್ತಿದೆ. ಖಚಿತ ಕಾರಣ ತಿಳಿದುಬಂದಿಲ್ಲ. ಯಾರಿಗೆ ಸೇರಿದ್ದು ಎನ್ನುವುದೂ ಸ್ಪಷ್ಟವಾಗಿಲ್ಲ.

ಲಾಕ್ ಡೌನ್ ನಿಂದಾಗಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತವರಲ್ಲೇ ಹೈನುಗಾರರಿಗೆ ತೊಂದರೆ ಆಗುತ್ತಿದೆ. ಪೊಲೀಸರು ಹಾಲಿನ‌ ವಾಹನಗಳಿಗೂ ತಡೆ ಒಡ್ಡಿದ್ದಾರೆ. ಹೀಗಾಗಿ ಮಾರಾಟ ಸಾಧ್ಯ ಆಗುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT