ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳತಿಯರ ಗುಂಪಿನ ‘ಮನೆಯೂಟ’ದ ರುಚಿ

ಕಾರವಾರದಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಡೆಸುತ್ತಿರುವ ಮೊದಲ ‘ಕೇಟರಿಂಗ್ ಸರ್ವಿಸ್’
Last Updated 6 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕಾರವಾರ: ‘ಮಹಿಳೆಯರಾದ ನಾವು ಮನೆ ಮಂದಿಗೆಲ್ಲ ಶುಚಿ, ರುಚಿಯಾಗಿ ಅಡುಗೆ ಮಾಡಿ ಉಣಬಡಿಸುತ್ತೇವೆ. ಆದರೆ, ದೊಡ್ಡ ಸಮಾರಂಭಗಳಲ್ಲಿ ಅಡುಗೆ ಮನೆಯಲ್ಲಿ ಪುರುಷರದ್ದೇ ಪಾರುಪತ್ಯವಿರುತ್ತದೆ. ಮಹಿಳೆಯರು ಕೇವಲ ಸಹಾಯಕ್ಕಾಗಿ ಹೋಗುತ್ತಾರೆ. ಈಅಂತರವನ್ನು ಹೋಗಲಾಡಿಸುವುದು ನಮ್ಮ ಉದ್ದೇಶ...’

ಹೀಗೆ ಮಾತಿಗಿಳಿದವರು ನಗರದ ಸೋನಾರವಾಡದ ವಾಣಿ ಮಂಜುನಾಥ ಬಾಂದೋಡ್ಕರ್. ‘ನಾವುಗೆಳತಿಯರೆಲ್ಲ ಒಂದು ದಿನ ಸುಮ್ಮನೆ ಕುಳಿತುಹರಟೆ ಹೊಡೆಯುತ್ತಿದ್ದಾಗ ಇಂತಹ ಆಲೋಚನೆ ಬಂತು. ನಾವೂ ಯಾಕೆ ಸಮಾರಂಭಗಳಿಗೆ ಅಡುಗೆ ಮಾಡಿಕೊಡಬಾರದು? ಮನೆ ಮಂದಿ ಇಷ್ಟಪಡುವ ಕೈರುಚಿಯನ್ನು ಮತ್ತಷ್ಟು ಜನರಿಗೆ ಯಾಕೆ ತಲುಪಿಸಬಾರದು ಎಂದು ಚರ್ಚಿಸಿದೆವು’ ಎಂದು ವಿವರಿಸಿದರು.

‘ನಾವು ಅಡುಗೆ ಮಾಡಿ ಪೂರೈಕೆ ಮಾಡಲು ಸಾಧ್ಯವಾದೀತೇ? ನಮ್ಮ ಕೆಲಸವನ್ನು ಜನರು ಹೇಗೆ ಸ್ವೀಕರಿಸಬಹುದು? ಬಂಡವಾಳ, ಅಡುಗೆ ಬೇಯಿಸಲು ಪಾತ್ರೆಗಳು, ತರಕಾರಿ, ದಿನಸಿ ಪ್ರಮಾಣ ಮುಂತಾದವಿಚಾರಗಳನ್ನುಲೆಕ್ಕಾಚಾರ ಹಾಕಿದೆವು. ಇದರ ಸಾಧಕ ಬಾಧಕಗಳ ಬಗ್ಗೆ ಎಲ್ಲರೂ ವಿಸ್ತೃತವಾಗಿ ಮಾಹಿತಿ ವಿನಿಮಯ ಮಾಡಿಕೊಂಡೆವು. ನಮ್ಮ ಹಿರಿಯರ ಅನುಮತಿಯನ್ನೂ ಪಡೆದುಕೊಂಡ ಬಳಿಕ, 10 ಸದಸ್ಯೆಯರು ಇರುವ ಶ್ರೀ ದೈವಜ್ಞ ಮಹಿಳಾ ಕೇಟರಿಂಗ್ ಎಂಬ ಗುಂಪನ್ನು ರಚಿಸಿಕೊಂಡೆವು’ ಎಂದುಆರಂಭದ ಹಂತವನ್ನು ವಿವರಿಸಿದರು.

‘ಇದು ಸಮಾನತೆಯ ಕಾಲ. ಪುರುಷರಿಗೆ ಸಮನಾಗಿ ಮಹಿಳೆಯರೂ ದುಡಿಯುವುದು ಸಾಮಾನ್ಯ ಸಂಗತಿಯಾಗಿದೆ.ಎಲ್ಲವೂ ದುಬಾರಿಯಾಗಿರುವ ಈ ದಿನಗಳಲ್ಲಿ ಮನೆಯಲ್ಲಿ ಒಬ್ಬನ ದುಡಿಮೆಯು ಕುಟುಂಬದ ನಿರ್ವಹಣೆಗೆ ಸಾಕಾಗುವುದಿಲ್ಲ. ನಮ್ಮ ಮನೆಗಳಲ್ಲಿ ಪುರುಷರು ಮೊದಲು ಚಿನ್ನಾಭರಣಗಳ ಕೆಲಸ ಮಾಡುತ್ತಿದ್ದರು. ಆದರೆ, ಬಂಗಾರದ ದರ ಏರಿಕೆಯಾದ ಬಳಿಕ ಅವರಿಗೆ ಕೆಲಸವೇ ಇಲ್ಲದಾಗಿದೆ. ಹಾಗಾಗಿ ಕುಟುಂಬದ ನಿರ್ವಹಣೆಗೆ ನಾವುಕೆಲಸ ಮಾಡಲು ಶುರು ಮಾಡಿದೆವು’ ಎಂದು ಹೇಳಿದರು.

‘ಕೌಟುಂಬಿಕ ಆರ್ಥಿಕ ಸ್ಥಿತಿ ನಿಭಾಯಿಸಲು ನಾವೂ ಮುಂದಾದೆವು. ಇದು ದೈನಂದಿನ ಜೀವನ ಸುಧಾರಿಸಲು ನೆರವಾಗುತ್ತಿದೆ’ ಎಂದು ಹೆಮ್ಮೆಯಿಂದ ಹೇಳಿದರು.

‘ಪಾಲಕರು ಹೆಣ್ಣುಮಕ್ಕಳನ್ನು ಸಣ್ಣ ಪ್ರಾಯಕ್ಕೇ ಮದುವೆ ಮಾಡಿಸುತ್ತಾರೆ. ಇದರಿಂದ ಅವರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಬೇರೆ ನೌಕರಿ ಪಡೆಯಲೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪರ್ಯಾಯವಾಗಿ ನಾವೇ ಗೃಹೋದ್ಯಮದ ರೀತಿಯಲ್ಲಿ ಶುರು ಮಾಡಿಕೊಂಡು ಸ್ವಾವಲಂಬಿ ಜೀವನಕ್ಕೆ ಮಾರ್ಗೋಪಾಯ ಕಂಡುಕೊಂಡೆವು’ ಎಂದುಮುಗುಳ್ನಕ್ಕರು.

ಸಂಪೂರ್ಣ ಜವಾಬ್ದಾರಿ:‘ಅಡುಗೆ ಮಾಡುವುದರಿಂದ ಮೊದಲಾಗಿ ಸಮಾರಂಭಗಳಲ್ಲಿ ಅತಿಥಿಗಳಿಗೆ ಬಡಿಸುವವರೆಗೂ ನಮ್ಮ ತಂಡದ ಮಹಿಳೆಯರೇ ಕಾರ್ಯ ನಿರ್ವಹಿಸುತ್ತಾರೆ. ಅಗತ್ಯವಿದ್ದರೆ ಮಾತ್ರನಮ್ಮ ಮನೆಗಳಿಂದ ಪುರುಷರು ಸೇರಿಕೊಳ್ಳುತ್ತಾರೆ. ಈ ರೀತಿ ಮಾಡುತ್ತಿರುವ ಕಾರಣ ಒಂದಷ್ಟು ಖರ್ಚು ಕೂಡ ಉಳಿಯುತ್ತಿದೆ’ ಎನ್ನುತ್ತಾರೆ ತಂಡದ ಸದಸ್ಯೆ ಸ್ಮಿತಾ ರಾಯ್ಕರ್.

‘ಸಮಾರಂಭ ಆಯೋಜಕರೇ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅದು ಸಾಧ್ಯವಾಗದಿದ್ದರೆ ನಾವು ಬಾಡಿಗೆ ವಾಹನದಲ್ಲಿ ತೆಗೆದುಕೊಂಡು ಹೋಗುತ್ತೇವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT