ಶನಿವಾರ, ಜನವರಿ 18, 2020
19 °C

ಮಾಜಿ ಸೈನಿಕನ ಮೇಲೆ ಕಾಡಾನೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ (ಕೊಡಗು): ಮಾಜಿ ಸೈನಿಕರೊಬ್ಬರ ಮೇಲೆ ಸೋಮವಾರ ಕಾಡಾನೆಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.

ಅಮ್ಮತ್ತಿ ಸಮೀಪದ ಕುಂಬೇರಿ ಗ್ರಾಮ ಮಾಜಿ ಸೈನಿಕರಾದ ಮಾಚಿಮಂಡ ಶಂಭು (68) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತೋಟಕ್ಕೆ ತೆರಳಿ ವಾಪಸ್ಸಾಗುವಾಗ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಶಂಭು ಅವರು ಕಾಡಾನೆಯಿಂದ ತಪ್ಪಿಸಿಕೊಳ್ಳಲು ಓಡಲು ಯತ್ನಿಸಿದರೂ ಅವರಿಗೆ ಸಾಧ್ಯವಾಗಿಲ್ಲ. ಶಂಭು ಅವರಿಗೆ ಅಮ್ಮತ್ತಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕಾಡಾನೆ ಕಾಡಿಗಟ್ಟಿ: ಅಮ್ಮತ್ತಿ ಒಂಟಿಯಂಗಡಿ, ಕಣ್ಣಂಗಾಲ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಕಾಡಾನೆ ಹಿಂಡು ಕೃಷಿ ಫಸಲನ್ನು ನಾಶಗೊಳಿಸುತ್ತಿವೆ. ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದು, ಕಾಡಾನೆಯನ್ನು ಕೂಡಲೇ ಕಾಡಿಗಟ್ಟಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು