ಗುರುವಾರ , ಮಾರ್ಚ್ 4, 2021
18 °C

ಮದ್ಯ ಶೇ. 6ರಷ್ಟು ದುಬಾರಿ: ಮಂಗಳವಾರದಿಂದಲೇ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿದ್ದ ಮದ್ಯದ ದರ ಏರಿಕೆ ಮಂಗಳವಾರದಿಂದಲೇ ಜಾರಿಗೆ ಬಂದಿದೆ.

42 ದಿನಗಳ ಸುದೀರ್ಘ ಬಂದ್‌ ಬಳಿಕ ಸೋಮವಾರದಿಂದ ಮಾರಾಟ ಆರಂಭವಾಗಿದ್ದರೂ, ಮೊದಲ ದಿನ ಹಳೆಯ ದರಗಳಲ್ಲೇ ವ್ಯಾಪಾರ ನಡೆದಿತ್ತು. ಕೆಲ ಮದ್ಯ ಮಾರಾಟಗಾರರು ಗ್ರಾಹಕರಿಂದ ಹೊಸ ದರ ವಸೂಲು ಮಾಡಿದ ಬಗ್ಗೆ ಅಬಕಾರಿ ಇಲಾಖೆಗೆ ದೂರುಗಳು ಬಂದಿವೆ.

ಹೊಸ ದರ ಏಪ್ರಿಲ್‌ 1ರಿಂದ ಜಾರಿಯಾಗಬೇಕಿತ್ತು. ಲಾಕ್‌ಡೌನ್‌ನಿಂದಾಗಿ ಮುಂದಕ್ಕೆ ಹೋಗಿದ್ದ ಶೇ 6ರಷ್ಟು ದರ ಏರಿಕೆ ಮಂಗಳವಾರದಿಂದಲೇ ಅನುಷ್ಠಾನಕ್ಕೆ ಬಂದಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು