ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆ: ಶಾಂತಿಯುತ ಮತದಾನ

Last Updated 12 ನವೆಂಬರ್ 2019, 20:33 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರು, ದಾವಣಗೆರೆ ಮಹಾನಗರಪಾಲಿಕೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಮಂಗಳವಾರ ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯ ಕಂಡಿತು.

ಕೋಲಾರ ನಗರಸಭೆ 6ನೇ ವಾರ್ಡ್ ವ್ಯಾಪ್ತಿಯ ಕೋಗಿಲಹಳ್ಳಿ ಮತಗಟ್ಟೆ ಬಳಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.

ದಾವಣಗೆರೆ ಮಹಾನಗರ ಪಾಲಿಕೆಯ ಕೆಲವು ವಾರ್ಡ್‌ಗಳಲ್ಲಿ ಮತದಾರರಿಗೆ ಪಕ್ಷದ ಚಿಹ್ನೆ ಇರುವ ಚೀಟಿಯನ್ನು ರಾಜಕೀಯ ಪಕ್ಷಗಳ ಕಾರ್ಯಕರ್ತರು ವಿತರಿಸಿದ್ದು ಆಕ್ಷೇಪಕ್ಕೆ ಕಾರಣವಾಯಿತು.ವಾರ್ಡ್‌ ಮರುವಿಂಗಡಣೆ ಬಳಿಕ ಮತದಾರರ ಹೆಸರು ಯಾವ ಮತಗಟ್ಟೆಯಲ್ಲಿದೆ ಎಂಬುದು ಗೊತ್ತಾಗದೆ ಕೆಲವೆಡೆ ಗೊಂದಲ ಉಂಟಾಗಿತ್ತು.

ಮುಳಬಾಗಿಲು ನಗರಸಭೆ 25ನೇ ವಾರ್ಡ್‌ನ ಬಳ್ಳಿಗರ ಪಾಳ್ಯ ಮತಗಟ್ಟೆಯಲ್ಲಿ ಹೊರಗಡೆಯಿಂದ ಮತದಾರರನ್ನು ಕರೆ ತಂದು ಮತ ಹಾಕಿಸಲಾಗುತ್ತಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಮತದಾನ ಬಹಿಷ್ಕರಿಸಲು ಮುಂದಾದರು. ಆಗ ಮಧ್ಯೆ ಪ್ರವೇಶಿಸಿದ ಪೊಲೀಸರು ಮನವೊಲಿಸಿ, ಮತದಾನ ನಡೆಯುವಂತೆ ನೋಡಿಕೊಂಡರು.ಕೆಜಿಎಫ್‌ನ 16ನೇ ವಾರ್ಡ್‌ನ 52ನೇ ಮತಗಟ್ಟೆಯಲ್ಲಿ ಮತದಾನ ಮಾಡುತ್ತಿದ್ದ ಚಿತ್ರೀಕರಿಸುತ್ತಿದ್ದ ಸುದ್ದಿವಾಹಿನಿಯ ಛಾಯಾಗ್ರಾಹಕ ಪ್ರೇಮ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದರು.

ಕನಕಪುರ ನಗರಸಭೆಯ 3, 5, 7ನೇ ವಾರ್ಡ್‌ನಲ್ಲಿ ಸಮಯ ಮುಗಿದ ನಂತರವೂ ಮತದಾನಕ್ಕೆ ಅವಕಾಶ ನೀಡ
ಲಾಯಿತು. ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಅವರಿಗೆ ಟೋಕನ್ ನೀಡಿ, ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಮಾಗಡಿ ಪುರಸಭೆಯ ಹೊಸಪೇಟೆಮತಗಟ್ಟೆ ಸಂಖ್ಯೆ 7ರಲ್ಲಿ ಪೂಜೆ ಸಲ್ಲಿಸಲು ಮುಂದಾದ ವ್ಯಕ್ತಿಯೊಬ್ಬರನ್ನು ಚುನಾವಣೆ ಸಿಬ್ಬಂದಿ ತಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT