ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಗಂಡ ಹೆಂಡತಿ ಜಗಳದಲ್ಲಿ‌ ಬಯಲಾಯಿತು ಗಾಂಜಾ ರಹಸ್ಯ

Published:
Updated:

ರಾಮನಗರ: ಬೃಹತ್ ಗಾಂಜಾ ಮಾರಾಟ ದಂಧೆಯೊಂದು ಗಂಡ–ಹೆಂಡತಿ‌ ಜಗಳದಿಂದಾಗಿ ಬಯಲಾಗಿದ್ದು, ಪೊಲೀಸರು ನಗರದಲ್ಲಿ ಬರೋಬ್ಬರಿ 44 ಕೆ.ಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.

ಇಲ್ಲಿನ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತನಗರ ರಾಯರಬೀದಿಯಲ್ಲಿ ವಾಸವಿರುವ ಬೈರೇಗೌಡ ಎಂಬುವರ ಮನೆಯಲ್ಲಿ 20 ಕೆ.ಜಿ ಹಾಗೂ ಅಲ್ಲಿಂದ ಮಾರಾಟವಾಗಿದ್ದ ಸಾಗಿಸಲ್ಪಡುತ್ತಿದ್ದ 24 ಕೆ.ಜಿ ಗಾಂಜಾವನ್ನು‌ ನಗರದ ಈದ್ಗ ಮೈದಾನದ ಬಳಿ ವಶಪಡಿಸಿಕೊಳ್ಳಲಾಗಿದೆ. 

ಬೈರೇಗೌಡ ಎಂಬುವರ ಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಗಾಂಜಾ ಸಂಗ್ರಹಿಸಿಟ್ಟು, ನಂತರ ಇಲ್ಲಿಂದ  ಮೈಸೂರು, ಕೊಡಗು, ಕೇರಳಕ್ಕೆ ಮಾರಾಟ ಮಾಡಲಾಗುತ್ತಿತ್ತು. ಆಂಧ್ರಪ್ರದೇಶದಿಂದ ಇಲ್ಲಿಗೆ ವ್ಯಕ್ತಿಯೋರ್ವ ಗಾಂಜಾ ತಂದುಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಗಂಡ, ಹೆಂಡತಿ ನಡುವೆ ಜಗಳವಾಗಿದೆ. ಇದರಿಂದಾಗಿ ಹೆಂಡತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಮಾಲು ವಶಪಡಿಸಿಕೊಂಡಿದ್ದು, ಖರೀದಿಗೆ ಬಂದಿದ್ದವರೂ ಸೇರಿ ಒಟ್ಟು ನಾಲ್ವರನ್ನು ಬಂಧಿಸಿದರು. ಕೆ.ಜಿ ಪ್ಯಾಕೆಟ್ 10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇದು ನಗರದಲ್ಲಿ‌ ನಡೆದ ಅತಿದೊಡ್ಡ ಗಾಂಜಾ ಪ್ರಕರಣವಾಗಿದೆ.

Post Comments (+)