ಶನಿವಾರ, ಜನವರಿ 18, 2020
18 °C

ಮಾರಾಟಕ್ಕಿಲ್ಲ: ಶಾಸಕ ಸುರೇಶ್ ಗೌಡ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ‘ನಾನು ಬಿಜೆಪಿ ಸೇರುತ್ತೇನೆ ಎಂಬ ಸುಳ್ಳು ಸುದ್ದಿ ಎರಡು ಮೂರು ದಿನಗಳಿಂದ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ. ನಾನು ಮಾರಾಟಕ್ಕಿಲ್ಲ, ಯಾವ ಪಕ್ಷಕ್ಕೂ ಹೋಗುವುದಿಲ್ಲ’ ಎಂದು ಶಾಸಕ ಸುರೇಶ್ ಗೌಡ ಬುಧವಾರ ಇಲ್ಲಿ ಸ್ಪಷ್ಟಪಡಿಸಿದರು.

‘ನಾನು ಜೆಡಿಎಸ್‌ನ ಶಿಸ್ತಿನ ಸಿಪಾಯಿ. ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಹಲವು ಸಲ ಸ್ಪಷ್ಟಪಡಿಸಿದ್ದೇನೆ. ಆದರೆ, ಮಾಧ್ಯಮದವರು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಪಕ್ಷ ಹಾಗೂ ಕ್ಷೇತ್ರದ ಕಾರ್ಯಕರ್ತರನ್ನು ಬಿಟ್ಟು ಹೋಗುವುದಿಲ್ಲ. ಮಾಧ್ಯಮದವರನ್ನು ಮೆಚ್ಚಿಸಲು ನಾನೇನು ಎದೆ ಬಗೆದು ತೋರಿಸಬೇಕಾ’ ಎಂದು ಅವರು ಪ್ರಶ್ನಿಸಿದರು.

ಸುಳ್ಳುಸುದ್ದಿಗಳಿಗೆ ಕಿವಿಗೊಡ ದಂತೆ ಕ್ಷೇತ್ರದ ಜನರಿಗೆ ಮನವಿ ಮಾಡಿದ ಅವರು, ‘ಗಾಳಿ ಸುದ್ದಿ ಪ್ರಸಾರ ಮಾಡಬೇಡಿ. ನನ್ನನ್ನು ಕೇಳಿ ಖಚಿತಪಡಿಸಿಕೊಂಡ ಬಳಿಕ ಸುದ್ದಿ ಬಿತ್ತರಿಸಿ’ ಎಂದು ಮಾಧ್ಯಮದವರಿಗೆ ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು