ಮಂಗಳವಾರ, ಆಗಸ್ಟ್ 20, 2019
23 °C

ಕುಮಾರಸ್ವಾಮಿ ಜನರ ಭಾವನೆ ತಿಳಿದು ನಡೆಯಬೇಕು: ಸಂಸದ ಜಾಧವ್

Published:
Updated:

ಕಲಬುರ್ಗಿ: ಸಮ್ಮಿಶ್ರ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ.ಶಾಸಕರು ಸ್ವಯಂ ಪ್ರೇರಣೆಯಿಂದ ಹೊರಬಂದಿದ್ದಾರೆ. ಜನರ ಭಾವನೆ ತಿಳಿದುಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಡೆದುಕೊಳ್ಳಬೇಕು ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.

ನಗರದಲ್ಲಿ ಭಾನುವಾರ ‌ಸುದ್ದಿಗಾರರೊಂದಿಗೆ ‌ಮಾತನಾಡಿದ ಅವರು, ‘ಸಭಾಧ್ಯಕ್ಷರ (ಕೆ.ಆರ್‌.ರಮೇಶ್‌ ಕುಮಾರ್‌) ನಡೆ ತೃಪ್ತಿಕರವಾಗಿಲ್ಲ. ಆದರೂ ಅವರು ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ’ ಎಂದು ಹೇಳಿದರು. 

‘ಹಣಕ್ಕಾಗಿ ಹೋದವರು ಯಾರೂ ಇಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ನನ್ನ ಮೇಲೂ ಆರೋಪ ಮಾಡಿದ್ದರು. ಆದರೆ ಜನರು ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಒಂದು ಲಕ್ಷ ಮತದಿಂದ, ವಿಧಾನಸಭೆ ಚುನಾವಣೆಯಲ್ಲಿ ನನ್ನ ಮಗ ಅವಿನಾಶ್ ಜಾಧವನನ್ನು ಹತ್ತು ಸಾವಿರ ಮತಗಳಿಂದ ಗೆಲ್ಲಿಸಿದ್ದಾರೆ. ಯಾರ ಮನವನ್ನೂ ವಿನಾಕಾರಣ ನೋಯಿಸುವ ಕೆಲಸ ಮಾಡಬಾರದು’ ಎಂದು ತಿಳಿಸಿದರು.

ಮುಂಬೈನಲ್ಲಿ ಅತೃಪ್ತ ಶಾಸಕರು ಸಿಕ್ಕಿದ್ದರು. ನಿಮಗೆ ನ್ಯಾಯ ಸಿಗುತ್ತದೆ, ಧೈರ್ಯದಿಂದ ಇರುವಂತೆ ಹೇಳಿದ್ದೇನೆ ಎಂದರು.

ಇನ್ನಷ್ಟು... 

ರೇವಣ್ಣ, ಪರಮೇಶ್ವರ ಅವರ ಹತ್ತಾರು ಅಕ್ರಮ ಬಯಲು ಮಾಡುವೆ: ಕೆ.ಎನ್‌.ರಾಜಣ್ಣ

ರಾಜಕೀಯ ಸೇಡಿನಿಂದ ಬ್ಯಾಂಕ್ ಸೂಪರ್‌ಸೀಡ್: ದೇವೇಗೌಡ ವಿರುದ್ಧ ರಾಜಣ್ಣ ಆರೋಪ

ಚುನಾವಣೆಗೆ ಸ್ಪರ್ಧಿಸಲ್ಲ: ಕೆ.ಎನ್.ರಾಜಣ್ಣ ಘೋಷಣೆ

Post Comments (+)