ಶುಕ್ರವಾರ, ಅಕ್ಟೋಬರ್ 18, 2019
20 °C

ಮೈಸೂರು ದಸರಾ: 30 ಸೆಕೆಂಡ್‌ನಲ್ಲಿ 6 ಮೊಟ್ಟೆ ಗುಳುಂ

Published:
Updated:
Prajavani

ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಏರ್ಪಡಿಸಿದ್ದ ಮೊಟ್ಟೆ ತಿನ್ನುವ ಸ್ಪರ್ಧೆಯಲ್ಲಿ ಬಾಬುರಾಯನಕೊಪ್ಪಲಿನ ಕೌಶಿಕ್‌ 30 ಸೆಕೆಂಡ್‌ನಲ್ಲಿ 6 ಮೊಟ್ಟೆಗಳನ್ನು ತಿಂದು ಮೊದಲ ಸ್ಥಾನ ಪಡೆದುಕೊಂಡರು.

ಮಾರ್ಬಳ್ಳಿಯ ಪ್ರಜ್ವಲ್‌ 37 ಸೆಕೆಂಡ್‌ನಲ್ಲಿ, ಹುಣಸೂರಿನ ಮಂಜುನಾಥ್‌ 39 ಸೆಕೆಂಡ್‌ನಲ್ಲಿ ಆರು ಮೊಟ್ಟೆಗಳನ್ನು ತಿಂದು ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು. 21 ಮಂದಿ ಸ್ಪರ್ಧಿಸಿದ್ದರು.

‘ಮೂರು ವರ್ಷಗಳಿಂದ ಇಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೇನೆ. ಮೊದಲ ವರ್ಷ ಇಡ್ಲಿ ತಿನ್ನುವುದರಲ್ಲಿ, ಕಳೆದ ವರ್ಷ ಪಕೋಡ ತಿನ್ನುವುದರಲ್ಲಿ ಬಹುಮಾನ ಪಡೆದಿದ್ದೆ. ಈ ಬಾರಿ ಮೊಟ್ಟೆ ತಿಂದು ಮೊದಲ ಸ್ಥಾನ ಪಡೆದಿದ್ದೇನೆ. ಮನರಂಜನೆಗಾಗಿ ಮಾತ್ರ ಪಾಲ್ಗೊಳ್ಳುತ್ತೇನೆ’ ಎಂದು ಕೌಶಿಕ್‌ ಹೇಳಿದರು.

ಮೊದಲ ಬಾರಿಗೆ ಆಹಾರಮೇಳದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಎಲ್ಲೂ ಈ ರೀತಿಯ ಪ್ರಯತ್ನ ಮಾಡಿರಲಿಲ್ಲ. ಗೆಳೆಯರ ಒತ್ತಾಯದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ದ್ವಿತೀಯ ಸ್ಥಾನ ಪಡೆದಿದ್ದಕ್ಕಿಂತ ಸ್ಪರ್ಧಿಸಿದ್ದು, ಖುಷಿ ನೀಡಿತು ಎಂದು ಪ್ರಜ್ವಲ್‌ ಸಂತಸ ವ್ಯಕ್ತಪಡಿಸಿದರು.

Post Comments (+)