ಶುಕ್ರವಾರ, ಫೆಬ್ರವರಿ 26, 2021
22 °C

ಶಿವಮೊಗ್ಗ: ಗುಜರಾತ್‌ನಲ್ಲಿ ನೆಗೆಟಿವ್, ಇಲ್ಲಿ ಪಾಸಿಟಿವ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಶಿವಮೊಗ್ಗ: ಜಿಲ್ಲೆಗೆ ಬಂದ 9 ಜನರನ್ನೂ ಅಹಮದಾಬಾದ್‌ನಲ್ಲಿ ತಪಾಸಣೆ ಮಾಡಲಾಗಿತ್ತು. ಅಲ್ಲಿ 14 ದಿನಗಳ ಕ್ವಾರೆಂಟೈನ್ ಪೂರೈಸಿದ್ದ ಅವರಿಗೆ ಕೊರೊನಾ ಇರುವುದು ದೃಢಪಟ್ಟಿರಲಿಲ್ಲ. ಆದರೆ ಜಿಲ್ಲೆಗೆ ಬಂದ ನಂತರ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.

ಅಲ್ಲಿಂದ ಬರಲು ವಾಹನಗಳ ಸೌಕರ್ಯ ಇಲ್ಲದ ಪರಿಣಾಮ ಮತ್ತೆ ಒಂದು ತಿಂಗಳು ಅಲ್ಲೇ ಉಳಿದಿದ್ದರು. ಆ ಅವಧಿಯಲ್ಲಿ ಅವರಿಗೆ ವೈರಸ್‌ ತಗುಲಿರಬಹುದು ಎಂದು ಶಂಕಿಸಲಾಗಿದೆ. ಜಿಲ್ಲೆಗೆ ಬಂದಾಗ 8 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದು ಶಂಕೆಗೆ ಪುಷ್ಟಿ ನೀಡಿದೆ.

ಇಬ್ಬರಿಗೆ 65, ಒಬ್ಬರಿಗೆ 18 ವರ್ಷ

ಕೊರೊನಾ ಸೋಂಕು ಇರುವುದು ದೃಢಪಟ್ಟ 8 ಜನರಲ್ಲಿ ಇಬ್ಬರು 65 ವರ್ಷದವರು. ಒಬ್ಬರಿಗೆ 18 ವರ್ಷ. ಉಳಿದವರು 20, 25, 27, 43, 56 ವರ್ಷದವರು. ಎಲ್ಲರೂ ಪುರುಷರು. ಅವರನ್ನು ಪಿ–808ರಿಂದ ಪಿ–815ರವರೆಗಿನ ಕೋವಿಡ್‌-19 ರೋಗಿಗಳು ಎಂದು ಗುರುತಿಸಲಾಗಿದೆ.

ಜಿಲ್ಲೆಯ 25 ಸಿಬ್ಬಂದಿಗೆ ಕ್ವಾರಂಟೈನ್

ಅಹಮದಾಬಾದ್‌ನಿಂದ ಬಂದ 9 ಜನರನ್ನು ತಪಾಸಣೆ ನಡೆಸಿ ಅವರನ್ನು ಹಾಸ್ಟೆಲ್‌ ಕ್ವಾರೆಂಟೈನ್‌ಗೆ ಬಿಟ್ಟು ಬಂದ ಜಿಲ್ಲೆಯ ಪೊಲೀಸ್‌, ಕಂದಾಯ ಸಿಬ್ಬಂದಿ, ಹಾಸ್ಟೆಲ್‌ ವಾರ್ಡನ್ ಸೇರದಂತೆ 25 ಜನರನ್ನು 14 ದಿನಗಳ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ. ಕಾಲಕಾಲಕ್ಕೆ ಅವರ ಆರೋಗ್ಯ ತಪಾಸಣೆ ನಡೆಸಲಾಗುವುದು. ನಿಗಾ ಇಡಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು