ಕಾರವಾರ: ದೇಶ, ವಿದೇಶ ಸುತ್ತುವ ಬೃಹತ್ ಹಡಗುಗಳಲ್ಲಿ ಸಿಬ್ಬಂದಿಆಗುವವರು ‘ಡಿ.ಜಿ ಶಿಪ್ಪಿಂಗ್ ಸರ್ಟಿಫಿಕೇಟ್ ಕೋರ್ಸ್’ (ಹಡಗು ಮಹಾ ನಿರ್ದೇಶನಾಲಯ) ಮಾಡುವುದು ಕಡ್ಡಾಯ. ಆದರೆ, ನಮ್ಮ ರಾಜ್ಯದ ಒಂದೇ ಒಂದು ಶಿಕ್ಷಣ ಸಂಸ್ಥೆಯ ಪ್ರಮಾಣಪತ್ರಕ್ಕೂ ಮಾನ್ಯತೆಯಿಲ್ಲ.ಇದರಿಂದಸ್ಥಳೀಯರಿಗೆ ಅವಕಾಶಗಳು ತಪ್ಪಿಹೋಗುತ್ತಿವೆ.

ಏನಿದು ಪ್ರಮಾಣಪತ್ರ?

ಅಂತರರಾಷ್ಟ್ರೀಯನೌಕೆಯಲ್ಲಿಉದ್ಯೋಗ ಪಡೆಯುವವರು ‘ಹಡಗನ್ನೇರಲು ಸಮರ್ಥರು’ ಎಂದು ನೀಡುವ ಪ್ರಮಾಣ ಪತ್ರವಿದು. ಬೇರೆ ಬೇರೆ 90 ಬಗೆಯ ಹುದ್ದೆಗಳಿಗೆ ಅನುಗುಣವಾಗಿ ಒಂದು ದಿನದಿಂದ ಐದು ವರ್ಷಗಳಅವಧಿಯ ಕೋರ್ಸ್‌ಗಳಿವೆ.

ಈಪ್ರಮಾಣಪತ್ರ ನೀಡುವ ಕಾಲೇಜುಗಳಿಗೆ ಅಂತರರಾಷ್ಟ್ರೀಯ ಮಟ್ಟದ ಸಮಿತಿಯು ಮಾನ್ಯತೆ ನೀಡುತ್ತದೆ. ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಆಧರಿಸಿ ಕಾಲೇಜನ್ನು ಶ್ರೇಣೀಕರಿಸುತ್ತದೆ. ಸಿಬ್ಬಂದಿಯು ಹಡಗಿನಲ್ಲಿ ಹೇಗೆ ಇರಬೇಕು, ಏನೇನು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು, ಸಮುದ್ರದಲ್ಲಿಜೀವನ ಹೇಗಿರುತ್ತದೆ ಮುಂತಾದ ಮಾಹಿತಿಗಳನ್ನು ಇದರಲ್ಲಿ ತಿಳಿಸಲಾಗುತ್ತದೆ.

‘ಮಂಗಳೂರಿನಲ್ಲಿ ತಮಿಳುನಾಡಿನ ಕಾಲೇಜೊಂದರ ಶಾಖೆಯಿದ್ದು, ಅಲ್ಲಿ ಮರೈನ್ ಎಂಜಿನಿಯರಿಂಗ್‌ಗೆ ಮಾತ್ರ ಪ್ರಮಾಣಪತ್ರ ನೀಡುತ್ತಾರೆ. ಆದರೆ, ಆ ಸಂಸ್ಥೆಗೆ ಯಾವುದೇಶ್ರೇಣಿಇಲ್ಲದ ಕಾರಣ ಪ್ರಮಾಣಪತ್ರಕ್ಕೆ ಮಾನ್ಯತೆಯಿಲ್ಲ.ಸಮುದ್ರವೇ ಇಲ್ಲದ ರಾಜ್ಯಗಳಲ್ಲಿ ಶ್ರೇಣಿ ಹೊಂದಿರುವ ಹತ್ತಾರು ಸಂಸ್ಥೆಗಳಿವೆ. ನಮ್ಮ ರಾಜ್ಯದ ಕರಾವಳಿಯಲ್ಲಿದೇಶ ವಿದೇಶಗಳಲ್ಲಿ ಹೆಸರಾಗಿರುವ ಶಿಕ್ಷಣ ಸಂಸ್ಥೆಗಳಿವೆ. ಅವು ಡಿ.ಜಿ ಶಿಪ್ಪಿಂಗ್ ಕೋರ್ಸ್‌ನತ್ತ ಯಾಕೆ ಗಮನ ಹರಿಸಿಲ್ಲ ಎಂದು ತಿಳಿಯುತ್ತಿಲ್ಲ’ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಕುಮಟಾ ಅಧ್ಯಯನ ಕೇಂದ್ರದ ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ.

‘ಹಡಗಿನಲ್ಲಿ ಅಪಾರ ಉದ್ಯೋಗಾವಕಾಶಗಳಿವೆ. ಡಿ.ಜಿ.ಶಿಪ್ಪಿಂಗ್ ಪ್ರಮಾಣಪತ್ರಪಡೆಯದ ಮರೈನ್ ಎಂಜಿನಿಯರಿಂಗ್ ಪದವೀಧರರಿಗೆ ಹಡಗುಕಟ್ಟೆಯಲ್ಲಿ (ಡಾಕ್ ಯಾರ್ಡ್) ತಿಂಗಳಿಗೆ ₹ 25 ಸಾವಿರ, ₹ 30 ಸಾವಿರದ ಕೆಲಸ ಸಿಗುತ್ತದೆ. ಆದರೆ, ಪ್ರಮಾಣ ಪತ್ರ ಪಡೆದವರಿಗೆ ಶಿಪ್‌ಯಾರ್ಡ್‌ನಲ್ಲಿ ಕೆಲಸ ಮಾಡುವ ಅರ್ಹತೆ ಇರುತ್ತದೆ. ಅಲ್ಲಿ ತಿಂಗಳಿಗೆ ಕನಿಷ್ಠ ಎಂದರೂ ₹ 4 ಲಕ್ಷದವರೆಗೆ ವೇತನ ಪಾವತಿಸುತ್ತಾರೆ’ ಎಂದು ಅವರು ವ್ಯತ್ಯಾಸವನ್ನು ವಿವರಿಸುತ್ತಾರೆ.

ಶುಲ್ಕವೆಷ್ಟು?

ಆರು ತಿಂಗಳ ಪ್ರಮಾಣಪತ್ರ ಕೋರ್ಸ್ ಮಾಡಲು ಅಂದಾಜು ₹ 1 ಲಕ್ಷ ಬೇಕಾಗುತ್ತದೆ. ಗೋವಾದ ವಿವಿಧ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ರಿಯಾಯಿತಿ ದರದಲ್ಲಿ ಬೋಧಿಸಲಾಗುತ್ತಿದೆ. ಅಲ್ಲದೇಇದಕ್ಕೆ ಸಂಬಂಧಿಸಿದಡಿಪ್ಲೊಮಾ ಕಾಲೇಜು ಕೂಡ ಇದೆ. ಈ ಪ್ರಮಾಣಪತ್ರವು ನೌಕಾದಳದಲ್ಲಿ ಉದ್ಯೋಗ ಪಡೆಯಲೂ ನೆರವಾಗುತ್ತದೆ ಎಂದು ಅವರು ಹೇಳುತ್ತಾರೆ.

ಎಲ್ಲಿ, ಎಷ್ಟು ಕಾಲೇಜುಗಳಿವೆ?

ರಾಜ್ಯ;ಸಂಸ್ಥೆಗಳು

ಮಹಾರಾಷ್ಟ್ರ;69

ತಮಿಳುನಾಡು;39

ಪಶ್ಚಿಮಬಂಗಾಳ;19

ಉತ್ತರ ಪ್ರದೇಶ;11

ದೆಹಲಿ;8

ಕೇರಳ;7

ಗೋವಾ;6

ಹರಿಯಾಣ;5

ಒಡಿಶಾ;4

ಗುಜರಾತ್;4

ಬಿಹಾರ;3

* ಆಧಾರ: ಹಡಗು ಮಹಾನಿರ್ದೇಶನಾಲಯದ ವೆಬ್‌ಸೈಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.