ಶನಿವಾರ, ಡಿಸೆಂಬರ್ 14, 2019
22 °C

ತನ್ವೀರ್ ಸೇಠ್ ಕೊಲೆಗೆ ಸಂಘಟನೆ ಸಂಚು: ಐದು ಮಂದಿ ಪೊಲೀಸರ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಶಾಸಕ ತನ್ವೀರ್ ಸೇಠ್ ಅವರನ್ನು ಕೊಲ್ಲಲೆಂದೇ ಆರೋಪಿ ಪರ್ಹಾನ್ ಪಾಷಾ ಹಲ್ಲೆ ನಡೆಸಿರುವುದು ತನಿಖೆ ವೇಳೆ ಗೊತ್ತಾಗಿದೆ.

'ಕೆಲಸ ಕೇಳಲು ಹಾಗೂ ಇತರ ಸಹಾಯ ಕೇಳಲು ಹೋಗಿದ್ದಾಗ ನನ್ನನ್ನು ಸರಿಯಾಗಿ ಉಪಚರಿಸಲಿಲ್ಲ. ಇಂತಹ ಜನಪ್ರತಿನಿಧಿ ಇರುವುದು ಬೇಡ ಎಂದು ಹಲ್ಲೆ ನಡೆಸಿದೆ. ಇದಕ್ಕೂ ಮುನ್ನ ಮೂರು ಬಾರಿ ಯತ್ನಿಸಿ ವಿಫಲನಾಗಿದ್ದೆ' ಎಂದು ಆರೋಪಿ ಹೇಳಿಕೆ ನೀಡಿದ್ದಾ‌ನೆ ಎನ್ನಲಾಗಿದೆ.

ಆದರೆ, ಈತನ ಹಿಂದೆ ಸಂಘಟನೆಯೊಂದರ ಪಾತ್ರ ಇದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. 'ಸಂಘಟನೆಯೊಂದು ವ್ಯವಸ್ಥಿತವಾಗಿ ಯೋಜನೆ ಹೆಣೆದು ಈ ಕೃತ್ಯ ಎಸಗಿದೆ. ಈವರೆಗೆ 5 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ' ಎಂದು ಹೆಸರು ಹೇಳಲಿಚ್ಛಿಸದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಪ್ರಜಾವಾಣಿಗೆ ತಿಳಿಸಿದ್ದಾರೆ. ಜತೆಗೆ ಇನ್ನಷ್ಟು ಮಂದಿಯ ಶೋಧಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು