ಶನಿವಾರ, ಫೆಬ್ರವರಿ 27, 2021
31 °C

ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಪ್ರಕಟಣೆಯ ಕ್ಯಾಲೆಂಡರ್‌ನಲ್ಲಿ ಎಂಟೇ ತಿಂಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಹದೇಶ್ವರ ಬೆಟ್ಟ: ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಪ್ರಕಟಿಸಿರುವ 2019ರ ಕ್ಯಾಲೆಂಡರ್‌ನಲ್ಲಿ ಆಗಸ್ಟ್‌ ತಿಂಗಳವರೆಗೆ ಮಾತ್ರ ಮುದ್ರಣವಾಗಿದೆ. ಈ ಕ್ಯಾಲೆಂಡರ್‌ ಅನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನ.30ರಂದು ಬಿಡುಗಡೆ ಮಾಡಿದ್ದರು.

ನಾಲ್ಕು ತಿಂಗಳ ವಿವರಗಳು ಇಲ್ಲದ ಕ್ಯಾಲೆಂಡರ್‌ಗಳನ್ನೇ ಭಕ್ತರು ಹಾಗೂ ಸ್ಥಳೀಯರಿಗೆ ಪ್ರಾಧಿಕಾರವು ₹ 20ಕ್ಕೆ ಮಾರಾಟ ಮಾಡುತ್ತಿದೆ.

ಪ್ರಾಧಿಕಾರವು ಪ್ರತಿ ವರ್ಷ ಕ್ಯಾಲೆಂಡರ್‌ ಮುದ್ರಿಸಿ ಮಾರಾಟ ಮಾಡುತ್ತದೆ. ದೇವಾಲಯದಲ್ಲಿ ನಡೆಯುವ ಉತ್ಸವಗಳು, ಪೂಜಾ ಸಮಯ, ವಿವಿಧ ಸೇವೆಗಳ ವಿವರಗಳು ಇದರಲ್ಲಿ ಇವೆ. ಹೀಗಾಗಿ, ತಪ್ಪನ್ನು ಸರಿಪಡಿಸಿ ಹೊಸದಾಗಿ ಕ್ಯಾಲೆಂಡರ್‌ ವಿತರಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.

**
ಇದು ಮುದ್ರಣದೋಷದ ಪ್ರಮಾದ. ಮುಂದೆ ಮುದ್ರಣಗೊಳ್ಳಲಿರುವ ಕ್ಯಾಲೆಂಡರ್‌ಗಳಲ್ಲಿ ಈ ಸಮಸ್ಯೆ ಆಗದು. ದೋಷಪೂರಿತ ಕ್ಯಾಲೆಂಡರ್‌ ಖರೀದಿಸಿದವರಿಗೆ ಹೊಸ ಕ್ಯಾಲೆಂಡರ್‌ ವಿತರಿಸಲಾಗುವುದು
- ಕೆ.ಎಂ.ಗಾಯತ್ರಿ, ಪ್ರಾಧಿಕಾರದ ಕಾರ್ಯದರ್ಶಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು