ಸಿಎಂ ವಿರೋಧ ಪಕ್ಷಗಳನ್ನು ಜೀತದಾಳುವಿನಂತೆ ನೋಡುತ್ತಿದ್ದಾರೆ: ಯಡಿಯೂರಪ್ಪ

7

ಸಿಎಂ ವಿರೋಧ ಪಕ್ಷಗಳನ್ನು ಜೀತದಾಳುವಿನಂತೆ ನೋಡುತ್ತಿದ್ದಾರೆ: ಯಡಿಯೂರಪ್ಪ

Published:
Updated:

ಬೆಳಗಾವಿ: ರೈತರು, ಮಹಿಳೆಯರು ಹಾಗೂ ವಿರೋಧ ಪಕ್ಷಗಳ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಗುರವಾಗಿ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷಗಳು ತಮ್ಮ ಜೀತದಾಳುವಿನಂತೆ ಇರಬೇಕೆಂದು ಬಯಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕಿಡಿಕಾರಿದರು.

ಪಕ್ಷದ ರೈತ ಮೋರ್ಚಾ ವತಿಯಿಂದ ಇಲ್ಲಿನ ಸುವರ್ಣ ವಿಧಾನಸೌಧದ ಬಳಿಯ ಅಲಾರವಾಡ ಕ್ರಾಸ್‌ ಬಳಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್‌ ರೈತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕುಮಾರಸ್ವಾಮಿ ಅವರ ಬಯಕೆ ಎಂದಿಗೂ ಈಡೇರುವುದಿಲ್ಲ. ಸಮ್ಮಿಶ್ರ ಸರ್ಕಾರ ತೊಲಗುವವರೆಗೆ ರಾಜ್ಯದ ಉದ್ದಗಲ್ಲಕ್ಕೂ ಹೋರಾಟ ನಡೆಸುತ್ತೇವೆ. ಕುಂಭಕರ್ಣ ನಿದ್ರೆಯಲ್ಲಿರುವ ಸರ್ಕಾರವನ್ನು ಬಡಿದೆಬ್ಬಿಸುತ್ತೇನೆ. ಅಧಿವೇಶನದಲ್ಲಿ ಒಂಟಿ ಕಾಲಿನ ಮೇಲೆ ನಿಲ್ಲಿಸುತ್ತೇನೆ’ ಎಂದು ತಿಳಿಸಿದರು.

‘ಸೊಕ್ಕಿನಿಂದ, ಠೇಂಕಾರದಿಂದ ಉತ್ತರ ನೀಡುವುದನ್ನು ಕುಮಾರಸ್ವಾಮಿ ಬಿಡಬೇಕು. ನಾನು ಇನ್ನೂ 15 ವರ್ಷಗಳ ಕಾಲ ರಾಜಕೀಯದಲ್ಲಿ ಇರುತ್ತೇನೆ. ಜೆಡಿಎಸ್‌ ಪಕ್ಷವನ್ನು ಮನೆಗೆ ಕಳುಹಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಉತ್ತರ ಕರ್ನಾಟಕದವರು ಜೆಡಿಎಸ್‌ಗೆ ಮತ ನೀಡಿಲ್ಲ ಎಂದು ಮಾತುಮಾತಿಗೆ ಹೇಳುತ್ತೀರಿ. ಆದರೆ, ಹುಬ್ಬಳ್ಳಿಯಲ್ಲಿ ನೀವೇ ಮಾಡಿದ್ದ ಬಾಡಿಗೆ ಮನೆಯಲ್ಲಿ ಏಷ್ಟು ದಿನ ವಾಸವಾಗಿದ್ದೀರಿ? ಉತ್ತರ ಕರ್ನಾಟಕದ ಯಾವೊಂದೂ ಗ್ರಾಮದಲ್ಲಿ ವಾಸ್ತವ್ಯ ಮಾಡಲಿಲ್ಲವೇಕೆ? ನೀವು ನೀಡಿದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಲಿಲ್ಲವೇಕೆ? ಎಂದು ಕುಮಾರಸ್ವಾಮಿ ಅವರನ್ನು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !