ಭಾನುವಾರ, ಫೆಬ್ರವರಿ 28, 2021
29 °C

ಮಧ್ಯಪ್ರದೇಶದಲ್ಲಿ ಮದ್ಯಪ್ರಿಯರ ಬೆರಳಿಗೆ ಶಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ: ಮದ್ಯ ಖರೀದಿಸಲು ಬರುವವರ ಮೇಲೆ ನಿಗಾ ಇಡಲು ಮಧ್ಯಪ್ರದೇಶದ ಹೋಶಂಗಬಾದ್‌ ಜಿಲ್ಲೆಯ ಅಬಕಾರಿ ಅಧಿಕಾರಿ ವಿಶಿಷ್ಟ ಮಾರ್ಗ ಅನುಸರಿಸಿದ್ದಾರೆ. ಮದಿರೆ ಕೊಳ್ಳಲು ಬರುವವರ ಬೆರಳಿಗೆ ಶಾಯಿ ಹಾಕಲು, ಸಂಪರ್ಕ ಮಾಹಿತಿ ಪಡೆದುಕೊಳ್ಳಲು ಅವರು ತಮ್ಮ ವ್ಯಾಪ್ತಿಯ ಎಲ್ಲ ಅಂಗಡಿಗಳಿಗೆ ಸೂಚನೆ ನೀಡಿದ್ದಾರೆ. 

‘ಹೋಶಂಗಬಾದ್‌ ಜಿಲ್ಲಾ ವ್ಯಾಪ್ತಿಯ ಅಂಗಡಿಗಳಲ್ಲಿ ಮದ್ಯ ಖರೀದಿಗೆ ಬರುವವರಿಗೆ ಅಳಿಸಲಾಗದ ಶಾಯಿಯನ್ನು ತೋರು ಬೆರಳಿಗೆ ಹಾಕಲು ಸೂಚಿಸಲಾಗಿದೆ. ಜನರನ್ನು ಪತ್ತೆ ಹಚ್ಚಲು ಈ ಉಪಾಯ ಮಾಡಲಾಗಿದೆ,’ ಎಂದು ಜಿಲ್ಲಾ ಅಬಕಾರಿ ಅಧಿಕಾರಿ ಅಬಿಷೇಕ್‌ ತಿವಾರಿ ಎಎನ್‌ಐಗೆ ತಿಳಿಸಿದ್ದಾರೆ. 

ಬೆರಳಿಗೆ ಶಾಯಿಯೊಂದೇ ಅಲ್ಲದೆ, ಮದ್ಯ ಖರೀದಿಸಲು ಬರುವ ಎಲ್ಲರ ದೂರವಾಣಿ ಸಂಖ್ಯೆ, ಮನೆ ವಿಳಾಸವನ್ನು ಪಡೆಯಲಾಗುತ್ತಿದೆ. ಒಂದು ವೇಳೆ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡರೆ ಜನರನ್ನು ಪತ್ತೆ ಮಾಡಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂದು ತೀವಾರಿ ತಿಳಿಸಿದ್ದಾರೆ. 

ನಮ್ಮ ಜಿಲ್ಲೆಯಲ್ಲಿ ಅಂಗಡಿಗಳು ತೆರೆದವಾದರೂ, ಶಾಯಿ ಪ್ರಯೋಗದಿಂದಾಗಿ ಜನಸಂದಣಿ ಸೃಷ್ಟಿಯಾಗಲಿಲ್ಲ ಎಂದು ಅವರು ಹೇಳಿದರು. 

ಒಂದು ಬಾರಿ ಮದ್ಯ ಖರೀದಿಸಿ ಹೋದ ವ್ಯಕ್ತಿಯೊಬ್ಬ ಮರಳಿ ಅದೇ ದಿನ ಅಂಗಡಿಗೆ ಬರುವುದನ್ನು ಶಾಯಿ ಗುರುತು ತಡೆಯುತ್ತಿದೆ. ಅಲ್ಲದೆ, ಅಂಗಡಿ ಎದುರು ಉಂಟಾಗುವ ಅನಗತ್ಯ ಜನಸಂದಣಿ ನಿಯಂತ್ರಣಗೊಂಡಿದೆ ಎಂದು ಅಂಗಡಿ ಮಾಲೀಕರೊಬ್ಬರು ಹೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು