ಭಾನುವಾರ, ಜೂನ್ 7, 2020
22 °C

ನಿಯಮ ಉಲ್ಲಂಘಿಸಿ ಕೆ.ಆರ್.ಪುರದಲ್ಲಿ ಕೋಳಿ, ಆಹಾರ ಕಿಟ್ ಪಡೆಯಲು ಮುಗಿಬಿದ್ದ ಜನರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್ ಕಾರಣ ಕೆ.ಆರ್.ಪುರ ಬಸವನಪುರ ವಾರ್ಡ್ನಲ್ಲಿ ದಿನಸಿ ಹಾಗೂ ಕೋಳಿಗಳ ಪಡೆಯಲು ಜನರು ಮುಗಿಬಿದ್ದರು.

ಗುರುವಾರ ಬೆಳಿಗ್ಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ನೇತೃತ್ವದಲ್ಲಿ ತಮ್ಮ ಕ್ಷೇತ್ರದ ಜನರಿಗೆ ಆಹಾರ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಅಂತರಕಾಯ್ದುಕೊಳ್ಳದ ಜನರು ಕೋಳಿ ಹಾಗೂ ಆಹಾರ ಕಿಟ್ ಪಡೆಯಲು ಒಬ್ಬರ ಮೇಲೆ ಒಬ್ಬರು ಬೀಳುತ್ತಾ ನೂಕು ನುಗ್ಗಲಲ್ಲಿ ನಿಂತಿರುವುದು ಕಂಡು ಬಂತು.

ಎರಡು ತಿಂಗಳು ಮನೆಯಲ್ಲಿದ್ದ ಜನರು ಗುಂಪು ಗುಂಪಾಗಿ ಬರುತ್ತಿದ್ದುದು ಕಂಡು ಬಂತು. ಈ ಸಮಯದಲ್ಲಿ ಪೊಲೀಸರು ಹತ್ತಿರದಲ್ಲಿಯೇ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಾಗಿದ್ದರು. ಕೆಲವರು ಮಾಸ್ಕ್ ಕೂಡ ಧರಿಸಿರಲಿಲ್ಲ. ಕೋಳಿ ಹಾಗೂ ಆಹಾರ ಕಿಟ್ ನೀಡುವವರೂ ಸರಿಯಾದ ಸಾಲಿನಲ್ಲಿ ಜನರನ್ನು ನಿಲ್ಲಿಸಿರಲಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು