ಶುಕ್ರವಾರ, ಫೆಬ್ರವರಿ 28, 2020
19 °C

ನೂತನ ಸಚಿವರಿಗೆ ಖಾತೆ ಹಂಚಿಕೆ: ರಮೇಶ್‌ ಜಾರಕಿಹೊಳಿಗೆ ಬಯಸಿದ್ದು ಸಿಕ್ಕಿತೇ? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಪುಟ ವಿಸ್ತರಣೆ ವೇಳೆ ಪ್ರಮಾಣ ವಚನ ಸ್ವೀಕರಿಸಿದ್ದ ನೂತನ ಮಂತ್ರಿಗಳಿಗೆ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರು ಸೋಮವಾರ ಖಾತೆ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರ ಅನುಮೋದನೆಗಾಗಿ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ. 

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಪಟ್ಟಿನಂತೆ ಅವರಿಗೆ ಜಲಸಂಪನ್ಮೂಲ ಇಲಾಖೆಯನ್ನೇ ಹಂಚಿಕೆ ಮಾಡಲಾಗಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಇಲಾಖೆಯನ್ನು ಡಿ.ಕೆ ಶಿವಕುಮಾರ್‌ ಅವರು ನಿಭಾಯಿಸಿದ್ದರು. 

ಫೆ.6ರಂದು ಹತ್ತು ಮಂದಿ ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 

ಯಾರಿಗೆ ಯಾವ ಖಾತೆ? 

ರಮೇಶ್‌ ಜಾರಕಿಹೊಳಿ – ಜಲಸಂಪನ್ಮೂಲ 

ಎಸ್‌.ಟಿ ಸೋಮಶೇಖರ್‌ – ಸಹಕಾರ 

ಶಿವರಾಮ ಹೆಬ್ಬಾರ್‌– ಕಾರ್ಮಿಕ 

ನಾರಾಯಣಗೌಡ– ತೋಟಗಾರಿಗೆ, ಪೌರಾಡಳಿತ 

ಬೈರತಿ ಬಸವರಾಜು – ನಗರಾಭಿವೃದ್ಧಿ 

ಕೆ. ಸುಧಾಕರ್‌ – ವೈದ್ಯಕೀಯ ಶಿಕ್ಷಣ 

ಬಿ.ಸಿ ಪಾಟೀಲ – ಅರಣ್ಯ 

ಶ್ರೀಮಂತ ಪಾಟೀಲ – ಜವಳಿ 

ಗೋಪಾಲಯ್ಯ – ಸಣ್ಣ ಕೈಗಾರಿಕೆ 

ಆನಂದ್‌ ಸಿಂಗ್‌ – ಆಹಾರ ಮತ್ತು ನಾಗರಿಕ ಪೂರೈಕೆ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು