ಮೈತ್ರಿ ಸರ್ಕಾರ ಬಿದ್ದುಹೋದರೆ, ಬಿಜೆಪಿ ಸರ್ಕಾರ ರಚನೆ: ಪ್ರಹ್ಲಾದ ಜೋಶಿ

ಬುಧವಾರ, ಜೂಲೈ 17, 2019
25 °C

ಮೈತ್ರಿ ಸರ್ಕಾರ ಬಿದ್ದುಹೋದರೆ, ಬಿಜೆಪಿ ಸರ್ಕಾರ ರಚನೆ: ಪ್ರಹ್ಲಾದ ಜೋಶಿ

Published:
Updated:
Prajavani

ಹುಬ್ಬಳ್ಳಿ: ‘ಕಾಂಗ್ರೆಸ್‌, ಜೆಡಿಎಸ್‌ ಶಾಸಕರ ರಾಜೀನಾಮೆ ವಿಷಯದಲ್ಲಿ ಬಿಜೆಪಿ ಪಾತ್ರವಿಲ್ಲ. ಒಂದು ವೇಳೆ ಮೈತ್ರಿ ಸರ್ಕಾರ ಬಿದ್ದುಹೋದರೆ ಮಧ್ಯಂತರ ಚುನಾವಣೆ ನಡೆಯಲು ಬಿಜೆಪಿ ಅವಕಾಶ ನೀಡುವುದಿಲ್ಲ. ನಾವೇ ಬಹುಮತ ಸಾಬೀತು ಪಡಿಸಿ, ಸರ್ಕಾರ ರಚಿಸುತ್ತೇವೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕರು ನೀಡಿರುವ ರಾಜೀನಾಮೆಯನ್ನು ಸ್ಪೀಕರ್‌ ರಮೇಶ ಕುಮಾರ್‌ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸವಿದೆ. ಅತೃಪ್ತ ಶಾಸಕರು ಬಿಜೆಪಿಗೆ ಬರುವುದಾದರೆ ಅವರ ಹಿನ್ನೆಲೆ ಪರಿಶೀಲಿಸಿಯೇ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದರು.

‘ರಾಜ್ಯ ರಾಜಕೀಯದಲ್ಲಿ ರಾಜೀನಾಮೆಯ ನಾಟಕ ನಡೆಯುತ್ತಿದೆ, ಇದು ವ್ಯವಸ್ಥಿತ ಆಟ. ಸಿದ್ದರಾಮಯ್ಯ ಈ ನಾಟಕದ ಸೂತ್ರಧಾರ. ಅವರೇ ಸಿ.ಎಂ. ಆಗಲಿ ಎಂದು ಕಾಂಗ್ರೆಸ್‌ನ ಒಂದು ಗುಂಪು ಕೆಲಸ ಮಾಡುತ್ತಿದ್ದರೆ, ಮತ್ತೊಂದು ಗುಂಪು ಅವರ ವಿರುದ್ಧವೇ ಬಂಡೆದ್ದಿದೆ’ ಎಂದು ಅಭಿಪ್ರಾಯಪಟ್ಟರು.

‘ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸತ್ಯ ಏನೆಂದು ಗೊತ್ತು, ಅವರಿಗೆ ರಾಷ್ಟ್ರಮಟ್ಟದಲ್ಲಿ ನಾಯಕತ್ವ ಇಲ್ಲದಿರುವುದೇ ಇದಕ್ಕೆಲ್ಲ ಕಾರಣವಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !