ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದಿಷ್ಟ ದಾಳಿ ಎನ್ನುವುದು ವಿಡಿಯೊ ಗೇಮ್‌ ಅಲ್ಲ: ಪ್ರಧಾನಿ ಮೋದಿ ಲೇವಡಿ

Last Updated 3 ಮೇ 2019, 13:36 IST
ಅಕ್ಷರ ಗಾತ್ರ

ಸಿಕರ್ (ರಾಜಸ್ಥಾನ): ‘ನಿರ್ದಿಷ್ಟ ದಾಳಿ ಮಾಡುವುದೆಂದರೆ ಎಂದರೆ ವಿಡಿಯೊ ಗೇಮ್‌ ಆಡಿದಂತಲ್ಲ’ ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.

ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ಆರು ಬಾರಿ ನಿರ್ದಿಷ್ಟ ದಾಳಿ ನಡೆಸಿದ್ದಾಗಿ ಕಾಂಗ್ರೆಸ್ ಗುರುವಾರ ಹೇಳಿಕೊಂಡಿದೆ.

ಇಲ್ಲಿ ಚುನಾವಣಾ ಪ್ರಚಾರದ ವೇಳೆ ಈ ಬಗ್ಗೆ ಮಾತನಾಡಿದ ಮೋದಿ,‘ನಾವು 2016ರಲ್ಲಿ ನಡೆಸಿದ ಸರ್ಜಿಕಲ್‌ ಸ್ಟ್ರೈಟ್‌ ಅನ್ನು ಕಾಂಗ್ರೆಸ್‌ ಮೊದಲು ವಿರೋಧಿಸಿತ್ತು. ಈಗ ಮೀ ಟೂ ಎನ್ನುತ್ತಾ, ತಮ್ಮ ಕಾಲದಲ್ಲಿಯೂ ದಾಳಿ ನಡೆಸಿದ್ದೇವೆ ಎಂದು ಸುಳ್ಳು ಹೇಳುತ್ತಿದೆ’ ಎಂದು ಟೀಕಿಸಿದರು.

‘ಪೆಹೆಲೇ ಉಪೇಕ್ಷಾ, ಫಿರ್‌ ವಿರೋಧ್‌, ಅಬ್‌ ಮೀ ಟೂ’ (ಮೊದಲು ನಿರ್ಲಕ್ಷ್ಯ, ನಂತರ ವಿರೋಧ, ಈಗ ಮೀ ಟೂ) ಎನ್ನುತ್ತಿದ್ದಾರೆ. ನಾಲ್ಕು ಹಂತದ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್‌ಗೆ ಸೋಲಿನ ಭೀತಿ ಶುರುವಾಗಿದೆ. ಹಾಗಾಗಿ ಹೊಸ ನಾಟಕ ಶುರುಮಾಡಿದ್ದಾರೆ’ ಎಂದು ಲೇವಡಿ ಮಾಡಿದರು.

‘ಕಾಂಗ್ರೆಸ್‌ ಅದ್ಯಾವ ರೀತಿಯ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದೆಯೊ? ಭಯೋತ್ಪಾದಕರಿಗೂ ಅದು ತಿಳಿಯಲಿಲ್ಲ, ಪಾಕಿಸ್ತಾನಕ್ಕೂ ಗೊತ್ತಾಗಿಲ್ಲ, ಭಾರತೀಯರಿಗೂ ಈ ಬಗ್ಗೆ ಮಾಹಿತಿ ಇಲ್ಲ. ಬಹುಶಃ ಕಾಂಗ್ರೆಸ್‌ನಲ್ಲಿರುವ ಜನರು ಯಾವ ವಯಸ್ಸಿನಲ್ಲಾದರೂ ವಿಡಿಯೊ ಗೇಮ್‌ ಆಡುತ್ತಾರೆ ಅನ್ನಿಸುತ್ತದೆ. ಇದರಿಂದ ಅವರು ಸರ್ಜಿಕಲ್‌ ಸ್ಟ್ರೈಕ್‌ ಅನ್ನು ವಿಡಿಯೊ ಗೇಮ್‌ ಎಂದು ಪರಿಗಣಿಸಿರಬೇಕು’ ಎಂದರು.

‘ಈ ಲೋಕಸಭಾ ಚುನಾವಣೆ ಮುಗಿಯುವ ಹೊತ್ತಿಗೆ ಕಾಂಗ್ರೆಸ್‌ ಮಾಡಿತ್ನೆನ್ನಲಾಗಿರುವ ಸರ್ಜಿಕಲ್‌ ಸ್ಟ್ರೈಕ್‌ ಸಂಖ್ಯೆ 600 ದಾಟಬಹುದು ಅನ್ನಿಸುತ್ತದೆ. ಕಾಂಗ್ರೆಸ್‌ ತನ್ನ ಆಡಳಿತದಲ್ಲಿ ಪೇಪರ್‌ನಲ್ಲೇ ಸರ್ಜಿಕಲ್‌ ಮಾಡಿರಬಹುದು. ಅದರಿಂದ ಯಾರಿಗೆ ಲಾಭವಾಗಿದೆ? ದೇಶ ಮತ್ತು ದೇಶದ ಭದ್ರತೆಗಂತೂ ಆಗಿಲ್ಲ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT