ಪ್ರಿಯಾಂಕಾ ಗಾಂಧಿ ಗೌರವಕ್ಕೆ ಧಕ್ಕೆ ಪ್ರಕರಣ ದಾಖಲಿಸಿದ ಕಾಂಗ್ರೆಸ್‌

7

ಪ್ರಿಯಾಂಕಾ ಗಾಂಧಿ ಗೌರವಕ್ಕೆ ಧಕ್ಕೆ ಪ್ರಕರಣ ದಾಖಲಿಸಿದ ಕಾಂಗ್ರೆಸ್‌

Published:
Updated:
Prajavani

ಬೆಂಗಳೂರು: ‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಅಶ್ಲೀಲ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಟ್ವೀಟ್‌ ಹಾಗೂ ಪೋಸ್ಟ್‌ ಮಾಡಿದ್ದಾರೆ. ಆ ಮೂಲಕ ಮಹಿಳೆಯ ಗೌರವಕ್ಕೆ ಧಕ್ಕೆ ತಂದಿದ್ದಾರೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

14 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ಅವರನ್ನು ಪತ್ತೆಗೆ ಮುಂದಾಗಿದ್ದಾರೆ.

‘ಪ್ರಿಯಾಂಕಾ ಗಾಂಧಿ ಅವರ ಭಾವಚಿತ್ರಗಳನ್ನು ಬಳಸಿಕೊಂಡು ಅಶ್ಲೀಲ ಪದಗಳಿಂದ ನಿಂದಿಸಿ ಟ್ವೀಟ್ ಹಾಗೂ ಪೋಸ್ಟ್‌ ಮಾಡಲಾಗಿದೆ. ಅದಕ್ಕೆ ಹಲವರು, ಅಶ್ಲೀಲ ಪದಗಳನ್ನು ಬಳಸಿ ಪ್ರತಿಕ್ರಿಯಿಸಿದ್ದಾರೆ. ಅವರೆಲ್ಲರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪೊಲೀಸರು, ‘ಟ್ವಿಟರ್‌ ಹಾಗೂ ಫೇಸ್‌ಬುಕ್‌ ಪೋಸ್ಟ್‌ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !