ಮಂಗಳವಾರ, ಜುಲೈ 14, 2020
27 °C

ಪಿಯು ಇಂಗ್ಲಿಷ್‌ ಪರೀಕ್ಷೆ: ಆನ್‌ಲೈನ್‌ ತರಗತಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ ಇದೇ 18ರಂದು ನಡೆಯಲಿದ್ದು, ಸುಮಾರು 3 ತಿಂಗಳ ಅಂತರದಿಂದಾಗಿ ವಿದ್ಯಾರ್ಥಿಗಳು ಓದಿದ್ದನ್ನು ಮರೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಆನ್‌ಲೈನ್‌ನಲ್ಲಿ ಪುನರ್‌ಮನನ ತರಗತಿಗಳನ್ನು ನಡೆಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಅವರು, ಎಲ್ಲ ಕಾಲೇಜುಗಳ ಪ್ರಾಂಶುಪಾಲರು ಮತ್ತು ಇಂಗ್ಲಿಷ್‌ ಉಪನ್ಯಾಸಕರು ಇದರ ಬಗ್ಗೆ ವಿಶೇಷ ಗಮನ ಹರಿಸಬೇಕು. ಶಿವಮೊಗ್ಗ ಪಿಯು ಇಂಗ್ಲಿಷ್‌ ಉಪನ್ಯಾಸಕರ ವೇದಿಕೆ ಸಿದ್ಧಪಡಿಸಿದ ವಿಡಿಯೊ ಯೂಟ್ಯೂಬ್‌ ಪಾಠವನ್ನು ಇಲಾಖೆಯ www.pue.kar.nic.in ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.

ಹೋಮ್ ಪೇಜ್‌ನಲ್ಲಿರುವ II PUC ENGLISH SUBJECT REVISION VEDEOS ಲಿಂಕ್‌ ಬಳಸಿ ವೀಕ್ಷಿಸಬಹುದು ಎಂದು ನಿರ್ದೇಶನ ನೀಡಿದ್ದಾರೆ.‌

ಪಟ್ಟಿ ಬಿಡುಗಡೆ: ತಮ್ಮ ಊರುಗಳಿಗೆ ತೆರಳಿ, ತಾವು ಇದ್ದಲ್ಲಿಯೇ ದ್ವಿತೀಯ ಪಿಯು ಇಂಗ್ಲಿಷ್ ‍ಪರೀಕ್ಷೆ ಬರೆಯಲು ಬಯಸಿರುವ ಹಾಸ್ಟೆಲ್‌ ವಾಸಿಗಳು ಮತ್ತು ವಲಸೆ ಕಾರ್ಮಿಕರ ಮಕ್ಕಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು