ಬುಧವಾರ, ಜನವರಿ 22, 2020
25 °C

ರಾಹುಲ್ ಗಾಂಧಿ ಮೊದಲು ಸಂಸತ್ತಿಗೆ ಬರಲಿ: ಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಪಲಾಯನ ಮಾಡಿರುವ ರಾಹುಲ್ ಗಾಂಧಿ ಸಂಸತ್ತಿಗೆ ಬಂದು ಚರ್ಚೆಯಲ್ಲಿ ಭಾಗವಹಿಸಲಿ. ನಂತರ, ದೇಶದ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸಲಿ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಟೀಕಿಸಿದರು.

‘ಭಾರತವು ಈಗ ಅತ್ಯಾಚಾರಗಳ ರಾಜಧಾನಿಯಾಗಿದೆ’ ಎಂದು ರಾಹುಲ್ ನೀಡಿದ ಹೇಳಿಕೆ ಕುರಿತು ಮೈಸೂರಿನಲ್ಲಿ ಭಾನುವಾರ ಈ ರೀತಿ ಪ್ರತಿಕ್ರಿಯಿಸಿದರು.

ಪ್ರಪಂಚ ಮುಳುಗಲ್ಲ: ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಜಯ ಗಳಿಸಲಿದ್ದಾರೆ. ಒಂದು ವೇಳೆ ಅವರು ಸೋತರೂ ಪ್ರಪಂಚ ಏನೂ ಮುಳುಗದು. ಹುಣಸೂರು ಕ್ಷೇತ್ರದಲ್ಲಿ ಸೋಲು ಎದುರಾದರೂ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು