ಬುಧವಾರ, ಜುಲೈ 28, 2021
21 °C

ಖಾನಾಪುರ: ರೈಲು ಡಿಕ್ಕಿ, 2 ಕಾಡುಕೋಣ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖಾನಾಪುರ: ತಾಲ್ಲೂಕಿನ ಲೋಂಡಾ-ಬೆಳಗಾವಿ ರೈಲು ಮಾರ್ಗದಲ್ಲಿ ಗುಂಜಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಎರಡು ಕಾಡುಕೋಣಗಳು ಸಾವಿಗೀಡಾಗಿವೆ.

ಅವು ಹಳಿಯಲ್ಲಿ ನಿಂತಿದ್ದವು ಎಂದು ತಿಳಿದುಬಂದಿದೆ. ಹಳಿಗಳ ಪಕ್ಕದಲ್ಲಿ ಕಳೇಬರಗಳು ಬಿದ್ದಿರುವುದನ್ನು ಗುರುತಿಸಲಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷಾ ವರದಿ ಶುಕ್ರವಾರ ಸಿಗಲಿದೆ’ ಎಂದು ಡಿಎಫ್‌ಒ ಅಮರನಾಥ್‌ ಖಚಿತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು