ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಮಳೆಗೆ ಬಾಳೆತೋಟ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ (ಮಂಡ್ಯ): ಹೋಬಳಿಯ ನಾಗದೊಡ್ಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಬಾಳೆತೋಟ ನಾಶವಾಗಿದೆ.

ಬಿ.ನಾಗರಾಜು ಎಂಬುವರಿಗೆ ಸೇರಿದ ತೋಟ ಇದಾಗಿದ್ದು, ಕಟಾವಿಗೆ ಬಂದಿದ್ದ ಬಾಳೆಗೊನೆಗಳು ನೆಲಕಚ್ಚಿವೆ. 1,000ಕ್ಕೂ ಹೆಚ್ಚು ಬಾಳೆ ಸಸಿಗಳು ಹಾಳಾಗಿವೆ. ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಏಲಕ್ಕಿ ತೋಟವೂ ನಾಶವಾಗಿದೆ.

‘ಬಾಳೆ ಬೆಳೆಯಲು ₹1 ಲಕ್ಷ ಸಾಲ ಮಾಡಿದ್ದೇನೆ. ಫಸಲು ಕೈಗೆ ಸಿಗುವ ಹೊತ್ತಿನಲ್ಲಿ ಬೆಳೆ ಹಾಳಾಗಿದೆ’ ಎಂದು ನಾಗರಾಜು ಪರಿಹಾರಕ್ಕೆ
ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು