ಬುಧವಾರ, ಆಗಸ್ಟ್ 4, 2021
20 °C

ರಾಮನಗರ: ದುಷ್ಕರ್ಮಿಗಳಿಂದ ಬಾಳೆ ಬೆಳೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ದುಷ್ಕರ್ಮಿಗಳು ಸುಮಾರು 300 ಕ್ಕೂ ಅಧಿಕ ಬಾಳೆ ಗಿಡಗಳನ್ನು ಕತ್ತರಿಸಿ ನಾಶ ಪಡಿಸಿರುವ ಘಟನೆ ತಾಲ್ಲೂಕಿನ ಕೂಟಗಲ್ ಹೋಬಳಿಯ ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪಟೇಲ್ ರಾಜಣ್ಣ ಅವರ‌ ತೋಟದಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ರಾಜಣ್ಣ 6 ಎಕರೆ ಅಡಿಕೆ‌ ತೋಟದ ನಡುವೆ ಬಾಳೆಯನ್ನು ಬೆಳೆದಿದ್ದರು. ಬಾಳೆ‌‌‌ ಗೊನೆಗಳು ಕಟಾವು ಮಾಡುವ ಹಂತಕ್ಕೆ‌ ಬಂದಿದ್ದವು. ಇಷ್ಟರಲ್ಲಿ ಈ ಘಟನೆ ನಡೆದಿದೆ‌.

ತೋಟದ ಒಂದು ಭಾಗದಲ್ಲಿ 300ಕ್ಕೂ ಅಧಿಕ‌ ಗಿಡಗಳನ್ನು ನಾಶ ಪಡಿಸಿ ಪರಾರಿಯಾಗಿದ್ದು, ಬೆಳಿಗ್ಗೆ ತೋಟಕ್ಕೆ‌ ಬಂದ ವೇಳೆ ಘಟನೆ ಬೆಳಕಿಗೆ ಬಂದಿತು ಎಂದು ರಾಜಣ್ಣ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು