ರಫೇಲ್‌ ವಿಮಾನ ಖರೀದಿ: ಮೋದಿಯ ಟೀಕಿಸಿದ ರಮ್ಯಾ

ಗುರುವಾರ , ಮಾರ್ಚ್ 21, 2019
32 °C

ರಫೇಲ್‌ ವಿಮಾನ ಖರೀದಿ: ಮೋದಿಯ ಟೀಕಿಸಿದ ರಮ್ಯಾ

Published:
Updated:

ಬೆಂಗಳೂರು: ರಫೇಲ್‌ ವಿಮಾನ ಖರೀದಿ ವಿಚಾರದಲ್ಲಿ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನ ವಿಭಾಗದ ಮುಖ್ಯಸ್ಥೆ ರಮ್ಯಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿದ್ದಾರೆ. 

ಯುಪಿಎ ಸರ್ಕಾರದ ಯೋಜನೆಯಂತೆಯೇ ರಫೇಲ್‌ ವಿಮಾನ ಖರೀದಿ ನಡೆದಿದ್ದರೆ ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ ಅವಕಾಶ ದೊರೆಯುತ್ತಿತ್ತೇ ವಿನಃ ಅನಿಲ್‌ ಅಂಬಾನಿಗಲ್ಲ ಎಂದು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನ ವಿಭಾಗದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದಾರೆ. 

#WhoAteTheRafalePie ಈ ಹ್ಯಾಶ್‌ ಟ್ಯಾಗ್ ಅಡಿಯಲ್ಲಿ ‘ದ ಹಿಂದೂ’ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ: ಮೋದಿ ಕೆಟಕಿದ ರಮ್ಯಾಗೆ ಟ್ವೀಟಿಗರ ಕುಟುಕು

ಕೇಂದ್ರದ ಯೋಜನೆಯ ಪ್ರಕಾರವೇ ಎಲ್ಲವೂ ಜರುಗಿದ್ದರೆ ಕಡಿಮೆ ಬೆಲೆಗೆ 36 ಜೆಟ್‌ಗಳ ಬದಲು 126 ಜೆಟ್‌ಗಳು ನಮ್ಮ ಬಳಿ ಇರುತ್ತಿದ್ದವು. ಜೊತೆಗೆ ಕಡಿಮೆ ತೆರಿಗೆ ಕಟ್ಟುತ್ತಿದ್ದೆವು. ನಾವು ಅನ್ಯರಿಗೆ ಹಣದ ನೆರವು ನೀಡಬೇಕಿರಲಿಲ್ಲ. ಭಾರತವೇ ಇದರ ಲಾಭ ಪಡೆದುಕೊಳ್ಳುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸಹಾಯಕ್ಕಾಗಿ ಅನಿಲ್‌ ಅಂಬಾನಿ (ಎಎ) ಅವರನ್ನು ಆಯ್ಕೆ ಮಾಡಿಕೊಂಡರು ಎಂದು ಟೀಕಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 14

  Angry

Comments:

0 comments

Write the first review for this !