ಗುರುವಾರ , ಅಕ್ಟೋಬರ್ 17, 2019
21 °C

ಪರಿಸ್ಥಿತಿ ಗಂಭೀರವಾದರೆ ರಾಜೀನಾಮೆ ನೀಡಲು ಸಿದ್ಧ: ಸಂಸದ ಜಿ.ಎಂ. ಸಿದ್ದೇಶ್ವರ

Published:
Updated:

ದಾವಣಗೆರೆ: ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವುದು ವಿಳಂಬವಾಗಿ, ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾದರೆ ರಾಜೀನಾಮೆ ನೀಡಲು ಸಿದ್ಧ ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಗಾಂಧಿ ಸಂಕಲ್ಪ ಯಾತ್ರೆಯ ಪ್ರಯುಕ್ತ ದಾವಣಗೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಪರಿಹಾರ ಕೋರಿ ಕೇಂದ್ರದಕ್ಕೆ ಸಲ್ಲಿಸಿದ್ದ ವರದಿ ತಿರಸ್ಕಾರ ಮಾಡಿರುವುದು ಗೊತ್ತಿಲ್ಲ. ಪರಿಹಾರ ನೀಡದೇ ಇದ್ದರೆ ರಾಜೀನಾಮೆ ನೀಡಲು ನಾನು ಸಿದ್ಧ’ ಎಂದು ಹೇಳಿದರು.

‘ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರಿಗೆ ರಾಜ್ಯದ ಸಂಸದರು, ಸಚಿವರು ಹಾಗೂ ಮುಖ್ಯಮಂತ್ರಿಗಳೂ ಸೇರಿ ಎಲ್ಲರೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಮೂರು ದಿವಸಗಳಲ್ಲಿ ಎಲ್ಲಾ ರಾಜ್ಯಗಳಿಗೂ ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಕೇಳಿದ ತಕ್ಷಣ ರಾಜೀನಾಮೆ ಕೊಡಲು ಆಗುವುದಿಲ್ಲ. ಪಕ್ಷದ ರಾಜ್ಯ, ರಾಷ್ಟ್ರಾಧ್ಯಕ್ಷರು ಕೇಳಿದರೆ ರಾಜೀನಾಮೆ ನೀಡುತ್ತೇವೆ. ವೇಳೆ ಸಿದ್ದರಾಮಯ್ಯ ಅವರನ್ನೇ ರಾಜೀನಾಮೆ ಕೊಡಿ ಎಂದು ಕೇಳಿದರೆ ಅವರು ಕೊಡುತ್ತಾರಾ’ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದವರು ರಾಜೀನಾಮೆ ಕೇಳುವುದು ಸಹಜ. ನಾವು ಅವರ ಜಾಗದಲ್ಲಿ ಇದ್ದಾಗ ಇದನ್ನೇ ಮಾಡುತ್ತಿದ್ದೆವು. ಅವರ ಕರ್ತವ್ಯ ಅವರು ಮಾಡುತ್ತಾರೆ. ಯಾರೂ ಏನು ಮಾಡುತ್ತಿದ್ದಾರೆ ಎನ್ನುವುದು ಜನರಿಗೂ ಗೊತ್ತಿದೆ. ಅವರು ತೀರ್ಪು ನೀಡುತ್ತಾರೆ.

Post Comments (+)