ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಶ್ವವಾಯು ಪೀಡಿತರಿಗೆ ರೋಬೊ ಸೂಟ್ ನೆರವು

Last Updated 13 ಡಿಸೆಂಬರ್ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ಪಾರ್ಶ್ವವಾಯುಪೀಡಿತರಿಗೆ ಅಗತ್ಯವಾದ ನೆರವು ಮತ್ತು ಚಿಕಿತ್ಸೆ ನೀಡಲು ಸೈಬರ್‌ಡೈನ್ ಸಂಸ್ಥೆಯು ಧರಿಸಬಹುದಾದ ರೋಬೊ ಸೂಟ್‌ ಹೈಬ್ರಿಡ್‌ ಅಸಿಸ್ಟಿವ್‌ ಲಿಂಬ್‌ (ಎಚ್‌ಎಎಲ್‌) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ರೋಬೊ ಸೂಟ್‌, ಪಾರ್ಶ್ವವಾಯು ಮತ್ತು ಆಘಾತಕ್ಕೆ ಒಳಗಾದವರ ದೈಹಿಕ ಚಟುವಟಿಕೆಗಳನ್ನು ಸುಧಾರಿಸಲು ನೆರವು ನೀಡುತ್ತದೆ. ವ್ಯಕ್ತಿಗಳು ತಮ್ಮ ದೇಹದ ಯಾವುದೇ ಭಾಗದ ಚಲನೆ ಬಯಸಿದಾಗ ಮಿದುಳಿನಿಂದ ಬರುವ ಸೂಚನೆಗಳನ್ನು ತ್ವಚೆಗೆ ಜೋಡಿಸಿರುವ ಸೆನ್ಸರ್‌ಗಳು ಗುರುತಿಸಿ ಚಲನೆ ಸಾಧ್ಯವಾಗಲು ನೆರವಾಗುತ್ತವೆ. ಲೋವರ್‌ ಲಿಂಬ್, ಲಂಬರ್‌ ಮತ್ತು ಸಿಂಗಲ್‌ ಜಾಯಿಂಟ್‌ – ಹೀಗೆ ಮೂರು ಬಗೆಗಳಲ್ಲಿ ರೋಬೊ ಸೂಟ್ ಲಭ್ಯ ಇವೆ ಎಂದು ಸಂಸ್ಥೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT