ಧಾರವಾಡ: ‘ಮುಂದುವರಿದ ರಾಷ್ಟ್ರಗಳೊಂದಿಗೆ, ಭಾರತ ಸರಿಸಮವಾಗಿ ನಿಂತಿದೆ ಎಂದಾದರೆ ಅದಕ್ಕೆ ಕಾರಣ ಭಾರತದ ರಾಕೆಟ್ ತಂತ್ರಜ್ಞಾನ. ಇದಕ್ಕೆ ಮೂಲ ಪ್ರೇರಣೆಯೇ ಟಿಪ್ಪು ಸುಲ್ತಾನ್’ ಎಂದು ಇಸ್ರೊ ಮಾಜಿ ಅಧ್ಯಕ್ಷ ಡಾ. ಎ.ಎಸ್.ಕಿರಣ್ ಕುಮಾರ್ ಶುಕ್ರವಾರ ಇಲ್ಲಿ ಹೇಳಿದರು.

ಇಲ್ಲಿ ಆಯೋಜಿಸಿದ್ದ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಮಾತನಾಡಿ ‘ಅಂದು ಯುದ್ಧಕ್ಕೆ ಬಳಕೆಯಾಗಿದ್ದ ರಾಕೆಟ್ ತಂತ್ರಜ್ಞಾನದ ಮೇಲೆ ಪಾಶ್ಚಾತ್ಯರು ಹೆಚ್ಚಿನ ಸಂಶೋಧನೆ ನಡೆಸಿ ಉಪಗ್ರಹ ಮತ್ತು ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದರು. 1963ರಲ್ಲಿ ಭಾರತವೂ ಸ್ವಾವಲಂಬಿಯಾಗಿ ರಾಕೆಟ್ ಅಭಿವೃದ್ಧಿಪಡಿಸಿತು. ಇದರ ಪರಿಣಾಮವಾಗಿ ಇಂದು ಕ್ರಯೊಜೆನಿಕ್ ಎಂಜಿನ್ ರಾಕೆಟ್ ಅಭಿವೃದ್ಧಿಯಾಗಿದೆ’ ಎಂದರು.

‘ಟಿಪ್ಪು ಅಭಿವೃದ್ಧಿಪಡಿಸಿದ ರಾಕೆಟ್‌ಗಳನ್ನು, ಈಸ್ಟ್ ಇಂಡಿಯಾ ಕಂಪನಿ ಅಧಿಕಾರಿಗಳು ಪತ್ರ ಕಳುಹಿಸಲು ಬಳಸಿದ್ದರು. ಹೀಗೆ ಜಗತ್ತಿನಲ್ಲಿ ಮೊದಲ ಬಾರಿಗೆ ಭಾರತದಲ್ಲಿ ತಯಾರಾದ ರಾಕೆಟ್ ಇಂದು ಇಡೀ ಜಗತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಕಾರಣವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.