ಭಾನುವಾರ, ನವೆಂಬರ್ 17, 2019
29 °C

ಸ್ಪೀಕರ್‌ಗೆ ರಾಜೀನಾಮೆ ಕೊಟ್ಟ ರೋಷನ್‌ ಬೇಗ್

Published:
Updated:

ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್ ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸ್ಪೀಕರ್‌ ಅವರನ್ನು ಮುಖತಃ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರು.

‘ನಾನು ನನ್ನ ಸ್ವಂತ ಇಚ್ಛೆಯಿಂದ ರಾಜೀನಾಮೆ ‌ನೀಡಿದ್ದೇನೆ. ನಾನು ಬಾಂಬೆಗೆ– ಗೋವಾಗೆ ಹೋಗಲ್ಲ’ ಎಂದು ರಾಜೀನಾಮೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು. ಬೇಗ್ ರಾಜೀನಾಮೆಯಿಂದ ದೋಸ್ತಿ ಸರ್ಕಾರದ 14ನೇ ವಿಕೆಟ್ ಪತನವಾಗಿದೆ.

‘ಸುಮಾರು 8500 ಹಜ್ ಯಾತ್ರಿಕರು ಮದೀನಾಗೆ ಹೋಗ್ತಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಹಜ್ ಸಮಿತಿಯ ಅಧ್ಯಕ್ಷನಾಗಿಯೇ ಇರುತ್ತೇನೆ. ನನಗೆ ಜವಾಬ್ದಾರಿ ಇದೆ. ನಾನು ಮತ್ತು ನನ್ನ ಮಗ ಹಜ್ ಯಾತ್ರೆಗೆ ಹೋಗ್ತಿದ್ದೀವಿ’ ಎಂದು ಹೇಳಿದರು.

 

ಪ್ರತಿಕ್ರಿಯಿಸಿ (+)