ಮಂಗಳವಾರ, ಜೂನ್ 2, 2020
27 °C

ವೈರಸ್‌ ಚಿತ್ರದ ಮಾದರಿಯ ಈ ಕಾಯಿ ಕಟ್ಟಿದರೆ ಕೊರೊನಾ ಬರಲ್ಲ! ವದಂತಿ ನಂಬಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನಹೊಸಹಳ್ಳಿ: ಕೊರೊನಾವೈರಸ್‌ ಸೋಂಕು ಹಿನ್ನೆಲೆಯಲ್ಲಿ ಗ್ರಾಮಿಣ ಭಾಗದ ಜನರು ವದಂತಿಗೆ ಕಿವಿಗೊಟ್ಟು ಮನೆಯ ಬಾಗಿಲಿಗೆ ಉಮ್ಮತ್ತಿ (ಹುಚ್ಚು ಎಲೆ) ಕಾಯಿ ಕಟ್ಟಿದ್ದಾರೆ.

ಹೋಬಳಿಯದ್ಯಾಂತ ಹಬ್ಬಿರುವ ಸುಳ್ಳು ವದ್ದಂತಿಯಿಂದಾಗಿ ಗ್ರಾಮಿಣ ಭಾಗದ ಜನತೆ ಈ ಗಿಡವನ್ನು ಕೊರೊನಾ ಗಿಡವೆಂದು ನಂಬಿ ತಮ್ಮ ಮನೆಯ ಬಾಗಿಲುಗಳಿಗೆ ಕಟ್ಟಿದ್ದಾರೆ.

ಹೋಬಳಿ ವ್ಯಾಪ್ತಿಯ ನಿಂಬಳಗೆರೆ, ಗಾಣಗಟ್ಟೆ, ಐಯ್ಯನಹಳ್ಳಿ, ಬಯಲು ತುಂಬರಗುದ್ದಿ,ಕಾನಹೊಸಹಳ್ಳಿ ಸೇರಿದಂತೆ ಇನ್ನು ಹಲವು ಹಳ್ಳಿಯ ಜನರು ಮನೆಯ ಭಾಗಿಲಿಗೆ ತೊರಣಗಳಂತೆ ಹುಚ್ಚು ಎಲೆಯ ಕಾಯಿಗಳನ್ನು ಕಟ್ಟಿದ್ದಾರೆ.

ಇನ್ನು ಉಮ್ಮತ್ತಿ ಕಾಯಿ ಕೊರೊನಾ ವೈರಸ್‌ ಚಿತ್ರದ ಮಾದರಿಯಲ್ಲಿದ್ದು, ಆ ಕಾಯಿಯನ್ನು ಮನೆಯ ಬಾಗಿಲಿಗೆ ಕಟ್ಟಿದ್ದಾರೆ ಕೊರೊನಾ ರೋಗ ನಮ್ಮ ಬಳಿ ಸುಳಿಯುವುದಿಲ್ಲ ಎಂಬುದಾಗಿ ಕಿಡಿಗೇಡಿಗಳು ಹಬ್ಬಿಸಿರುವ ಗಾಳಿ ಸುದ್ದಿಗೆ ಜನತೆ ಮಾರು ಹೊಗ್ಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು