ಶುಕ್ರವಾರ, ಸೆಪ್ಟೆಂಬರ್ 25, 2020
28 °C

ನೀಲಾ ಅವರಿಂದ ಆತ್ಮವಂಚನೆ: ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮಂಡ್ಯದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇರುವ ಕಾರಣ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುತ್ತಿಲ್ಲ ಎಂದು ಚಿಂತಕಿ ಕೆ.ನೀಲಾ ತಿಳಿಸಿದ್ದರು. ಬಳಿಕ, ಮೋಹನ್ ಆಳ್ವ ಅವರಂಥವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಗೈರಾಗುತ್ತಿದ್ದೇನೆ ಎಂದು ಮಾಧ್ಯಮಗಳ ಮುಂದೆ ಸುಳ್ಳು ಹೇಳಿದ್ದಾರೆ ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವೀಯ ಅಂತಃಕರಣ ಇರುವ ವ್ಯಕ್ತಿಗಳಿಗೆ ಕಾರ್ಯಕ್ರಮಕ್ಕೆ ಸ್ವಾಗತವಿದೆ. ಅಹಂಕಾರ, ಹಮ್ಮು–ಬಿಮ್ಮುಗಳಿದ್ದರಿಗೆ ಸ್ವಾಗತವಿಲ್ಲ. ನೀಳಾ ಅವರದ್ದು ಆತ್ಮವಂಚನೆಯ ಕೆಲಸ ಎಂದು ಟೀಕಿಸಿದರು.

‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಉಪನ್ಯಾಸಕರ ಹೆಸರನ್ನು ಮಾತ್ರ ಶ್ರೀಮಠ ಮುದ್ರಿಸುತ್ತದೆ. ಸ್ಥಳೀಯವಾಗಿ ಅಧ್ಯಕ್ಷತೆ ವಹಿಸುವವರನ್ನು ಆಯ್ಕೆಮಾಡುವ ಅಧಿಕಾರವನ್ನು ಜಿಲ್ಲಾ ಸಮಿತಿಗೆ ಕೊಡಲಾಗಿದೆ. ಆಚಾರ–ವಿಚಾರ ಶುದ್ಧವಿರುವ, ಬಸವತತ್ವದ ಪರ ಒಲವಿರುವ, ಜನರ ಪ್ರೀತಿ ಗಳಿಸಿದ ವ್ಯಕ್ತಿಯನ್ನು ಆಹ್ವಾನಿಸುವಂತೆ ಸೂಚನೆ ನೀಡಲಾಗಿರುತ್ತದೆ. ಅದರಂತೆ, ಸ್ಥಳೀಯ ಸಮಿತಿಯ ಆಯ್ಕೆ ಸ್ವಾತಂತ್ರ್ಯವನ್ನು ಗೌರವಿಸಬೇಕಾಗುತ್ತದೆ’ ಎಂದರು.

‘ನೀಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಲುವುಗಳನ್ನು ಮಂಡಿಸಿ ಪ್ರತಿಭಟಿಸಿದ್ದರೆ ಸ್ವಾಗತಿಸುತ್ತಿದ್ದೆ. ಕಸಬಿದ್ದ ಕಡೆ ಕಸ ಗುಡಿಸುವುದು ಪೊರಕೆಯ ಕೆಲಸ. ಅಲ್ಲಿ ಗುಡಿಸುವುದಿಲ್ಲ, ಇಲ್ಲಿ ಗುಡಿಸುವುದಿಲ್ಲ ಎಂದರೆ ಅದನ್ನು ಪೊರಕೆ ಎನ್ನುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.