ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲ್ಕೊ ಸೂರ್ಯಮಿತ್ರ ಪ್ರಶಸ್ತಿಗೆ ಆಯ್ಕೆ

Last Updated 9 ಜುಲೈ 2019, 20:00 IST
ಅಕ್ಷರ ಗಾತ್ರ

ಮೈಸೂರು: ಸೆಲ್ಕೊ ಸೂರ್ಯಮಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಕುಂದಾಪುರದ ಎ.ಜಿ.ಕೊಡ್ಗಿ ಮತ್ತು ಅಹಮದಾಬಾದ್‌ನ ಬಿಜಲ್‌ ಬ್ರಹ್ಮಭಟ್ ಆಯ್ಕೆಯಾಗಿದ್ದಾರೆ.

ಅಮಾಸೆಬೈಲು ಚಾರಿಟಬಲ್‌ ಟ್ರಸ್ಟ್‌ ಆರಂಭಿಸುವ ಮೂಲಕ ಉಡುಪಿ ಜಿಲ್ಲೆಯ ಅಮಾಸೆಬೈಲು ಗ್ರಾಮದ ಎಲ್ಲ ಮನೆಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಿ, ‘ಸೌರಶಕ್ತಿ ಗ್ರಾಮ’ವನ್ನಾಗಿಸಿದ ಕೊಡ್ಗಿ ಅವರನ್ನು ಈ ಪ್ರಶಸ್ತಿ ಪರಿಗಣಿಸಲಾಗಿದೆ. ಅಹಮದಾಬಾದ್‌ನ ಮಹಿಳಾ ಹೌಸಿಂಗ್‌ ಟ್ರಸ್ಟ್‌ನ ನಿರ್ದೇಶಕಿಯಾಗಿ ಸಮುದಾಯ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಬಿಜಲ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜುಲೈ 13 ರಂದು ಮೈಸೂರಿನ ಹೋಟೆಲ್‌ ಗ್ರ್ಯಾಂಡ್ ಮೌರ್ಯದಲ್ಲಿ ನಡೆಯುವ ಸೆಲ್ಕೊ ವಾರ್ಷಿಕ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT